ವಿದ್ಯಾರ್ಥಿಗಳಿಗೆ ಅಕ್ಕಪಡೆ ಮಾರ್ಗದರ್ಶನ

ನಾಪ್ಲೋಕ್ಲು ಅಕ್ಕಪಡೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ, ಪರಿಸರದ ಮಾಹಿತಿ ನೀಡಲಾಯಿತು.ಕೊಡಗು ಜಿಲ್ಲಾ ಪೊಲೀಸ್ ಮತ್ತು ಮಹಿಳಾ ಮಕ್ಕಳ ಸಬಲೀಕರಣ ಇಲಾಖೆಯ ಅಧೀನದಲ್ಲಿ ಬರುವ ಅಕ್ಕ ಪಡೆ ಸಿಬ್ಬಂದಿ  ಕೌಶಲ್ಯಾ, ಕುಮಾರಿ ಮತ್ತು ಶಾಲಾ ಶಿಕ್ಷಕರು, ಮಕ್ಕಳು ಇದ್ದರು

Published on

ನಾಪ್ಲೋಕ್ಲು:

ಇಲ್ಲಿನ ಅಕ್ಕಪಡೆಯಿಂದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು.

ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಪಾರಾಣಿ (ಬಲಮರಿ) ಮತ್ತು ಬೋಲ್ಲುಮಾಡು, ಮಾರುತಿ ಸ್ಕೂಲ್ ಮೂರ್ನಾಡು ಮಕ್ಕಳಿಗೆ ಮೌಲ್ಯ ಶಿಕ್ಷಣದ ಮಹತ್ವ, ಪರಿಸರ ಜಾಗೃತಿ, ಸ್ವಚ್ಛತೆ ಮತ್ತು ಸುರಕ್ಷತೆಗಳ ಬಗ್ಗೆ ಜಾಗೃತಿ, ದೈಹಿಕ ಶಿಕ್ಷಣದ ಮಹತ್ವ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ಮತ್ತು ಮಹಿಳಾ ಮಕ್ಕಳ ಸಬಲೀಕರಣ ಇಲಾಖೆಯ ಅಧೀನದಲ್ಲಿ ಬರುವ ಅಕ್ಕ ಪಡೆ ಸಿಬ್ಬಂದಿಗಳಾದ ಕೌಶಲ್ಯ, ಕುಮಾರಿ ಮತ್ತು ಶಾಲಾ ಶಿಕ್ಷಕರು, ಮಕ್ಕಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net