ಭಾಗಮಂಡಲದಲ್ಲಿ ಆಜ್ಞಾ ಮುಹೂರ್ತ ಸಂಪನ್ನ

ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
muhurta @ bhaga mandal
ಕಾವೇರಿ ತುಲಾ ಸಂಕ್ರಮಣ ಅಂಗವಾಗಿ ಭಾಗಮಂಡಲದ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಮಂಗಳವಾರ ಆಜ್ಞಾ ಮುಹೂರ್ತ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿತು. ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಹಾಗೂ ದೇವಾಲಯದ ಆಡಳಿತಾಧಿಕಾರಿ ಚಂದ್ರಶೇಖರ ಇತರರು ಉಪಸ್ಥಿತರಿದ್ದರು.agna
Published on: 

ನಾಪೋಕ್ಲು: ಪವಿತ್ರ ಕಾವೇರಿ ತುಲಾ ಸಂಕ್ರಮಣ ಹಾಗೂ ತೀರ್ಥೋದ್ಭವ ಜಾತ್ರಾ ಮಹೋತ್ಸವದ ಅಂಗವಾಗಿ ಭಾಗಮಂಡಲದ ಐತಿಹಾಸಿಕ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಆಜ್ಞಾ ಮುಹೂರ್ತ ಕಾರ್ಯಕ್ರಮ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಸಂಪ್ರದಾಯದಂತೆ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಮಂಗಳ ವಾದ್ಯಮೇಳಗಳೊಂದಿಗೆ ರವಿ ಹೆಬ್ಬಾರ್ ನಿವಾಸಕ್ಕೆ ತೆರಳಿ ಅಲ್ಲಿಯ ತೋಟದಿಂದ ಶಾಸ್ತ್ರೋಕ್ತವಾಗಿ ಬಾಳೆಗೊನೆ ಕಡಿಯಲಾಯಿತು. ನಂತರ ಬಾಳೆಗೊನೆಯೊಂದಿಗೆ ದೇವಾಲಯಕ್ಕೆ ಹಿಂತಿರುಗಿ ಪ್ರದಕ್ಷಿಣೆ ಬಳಿಕ ತಪ್ಪಡ್ಕ (ತಪ್ಪು ದಂಡ) ತೆರುವ ಧಾರ್ಮಿಕ ವಿಧಿ ಪೂರ್ಣಗೊಳಿಸಲಾಯಿತು.

ಮದ್ಯ, ಮಾಂಸ ಸೇವನೆ ನಿಷೇಧ:

ಜಾತ್ರೋತ್ಸವದ ಪವಿತ್ರತೆಯನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ತಲಕಾವೇರಿ ಜಾತ್ರೆಯಿಂದ ತೀರ್ಥೋದ್ಭವದ ಮರುದಿನದವರೆಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವನ್ನು ಭಕ್ತಾದಿಗಳು ಹಾಗೂ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇವಾಲಯದ ತಕ್ಕ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಪ್ರಮುಖರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ನಾಲ್ಕು ಗ್ರಾಮಗಳ ದೇವಾಲಯಗಳ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಹಾಗೂ ದೇವಾಲಯದ ಆಡಳಿತಾಧಿಕಾರಿ ಚಂದ್ರಶೇಖರ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಗಳ ವೇಳಾಪಟ್ಟಿ: ಅ. 15ರಂದು ಧನು ಲಗ್ನದಲ್ಲಿ ’ಅಕ್ಷಯ ಪಾತ್ರೆ’ಗೆ ಅಕ್ಕಿ ಹಾಕುವ ಕಾರ್ಯಕ್ರಮ. ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸುವ ವಿಧಿ. ಅ. 17ರ ರಾತ್ರಿ 7:50ಕ್ಕೆ ಮೇಷ ಲಗ್ನದಲ್ಲಿ ಪವಿತ್ರ’ ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ’ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net