ಇಂದು ಸಮಾಜದಲ್ಲಿ ಸ್ಥಾನಮಾನದಲ್ಲಿರುವರಿಗೆ, ಜನರು ಆರಿಸಿದ ಜನಪ್ರತಿನಿಧಿಗಳಿಗೆ ಜನರು ಗೌರವ ಕೊಡುವುದು ಕೇವಲ ಅವರ ಹುದ್ದೆಗೆ ಅಲ್ಲ, ಬದಲಿಗೆ ಅವರು ಪಡೆದುಕೊಂಡಿರುವ ಶಿಕ್ಷಣಕ್ಕೆ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಸಂವಿಧಾನದಲ್ಲಿ ಮಾಡಿಕೊಟ್ಟಿರುವ ಅವಕಾಶದಲ್ಲಿ ಸ್ಥಾನಮಾನ, ಹುದ್ದೆ, ಅಧಿಕಾರ ಒಂದು ಭಾಗವಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಮತ್ತೊಂದು ಭಾಗವಾಗಿದೆ ಎಂಬುವುದನ್ನು ತಿಳಿಸಿಕೊಟ್ಟಿದ್ದಾರೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನು ಆಸ್ತಿಯನ್ನಾಗಿ ಮಾಡಬೇಕು, ಶಿಕ್ಷಣದಿಂದ ಮಾತ್ರ ಸಮಾಜವನ್ನು ಬದಲಾಯಿಸಬಹುದು ಎಂದು ಹೇಳಿದರು.