ಗೋಣಿಮರೂರು ಡೇರಿಗೆ 1.50 ಲಕ್ಷ ರೂ. ವಿತರಣೆ

ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ 1.50 ಲಕ್ಷ ರೂ. ಮೊತ್ತದ ಡಿಡಿಯನ್ನು  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಟ್ಟಲ್ ಸಾಲಿಯನ್ ಹಸ್ತಾಂತರಿಸಿದರು. ಯಶೋದಾ, ಸೋಮೇಶ್, ಧರ್ಮಪ್ಪ ಇದ್ದರು.
ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ 1.50 ಲಕ್ಷ ರೂ. ಮೊತ್ತದ ಡಿಡಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಟ್ಟಲ್ ಸಾಲಿಯನ್ ಹಸ್ತಾಂತರಿಸಿದರು. ಯಶೋದಾ, ಸೋಮೇಶ್, ಧರ್ಮಪ್ಪ ಇದ್ದರು.
Published on
ಸೋಮವಾರಪೇಟೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಕಾರ್ಯಕ್ಷೇತ್ರದಲ್ಲಿ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ 1.50 ಲಕ್ಷ ರೂ. ಮೊತ್ತದ ಡಿಡಿಯನ್ನು ಶುಕ್ರವಾರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ವಿಟ್ಟಲ್ ಸಾಲಿಯನ್ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಶುಭ ಹಾರೈಸಿದರು. ಇದೇ ವೇಳೆ ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಜನಜಾಗೃತಿ ಸಮಿತಿ ಸದಸ್ಯ ಸೋಮೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಯಶೋದಾ, ಗಣ್ಯರಾದ ಧರ್ಮಪ್ಪ, ಚೇತನ್, ಮುತ್ತಮ್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net