ಪತ್ನಿಯ ಕರೆ ಬಂದಿಲ್ಲ ಅಂತ ಮನೆಗೆ ಬೆಂಕಿಯಿಟ್ಟ ಪತಿ: ಆರು ಮಂದಿ ಸಜೀವ ದಹನ

Man Fire 1
Published on

ಗೋಣಿಕೊಪ್ಪ: ಪತಿ, ಪತ್ನಿಯರ ನಡುವಿನ ಜಗಳದಿಂದಾಗಿ ಮನೆಗೆ ಬೆಂಕಿ ಇಟ್ಟ ಪರಿಣಾಮ ಆರು ಮಂದಿ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಬೇಬಿ (40), ಸೀತೆ (45), ಪ್ರಾರ್ಥನ (6), ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7) ಮೃತರು.

ಬೇಬಿ ಅವರ ಪತಿ ಬೋಜ (50) ತಡರಾತ್ರಿ, ಲೈನ್‌ಮನೆಯ ಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಪತ್ನಿ ಸಹೋದರನ ಮನೆಯಲ್ಲಿದ್ದಾಗ ಕರೆದು ಬಂದಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಇದೆ. ಬೋಜನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net