ಮೇಯಲು ಬಿಟ್ಟಿದ್ದ ಹಸುಗಳ ಮೇಲೆ ಕಟುಕರ ಗುಂಡೇಟು: ಸ್ಥಳದಲ್ಲೇ ಪ್ರಾಣ ಬಿಟ್ಟ ಗೋಮಾತೆ

Cow
Published on

ಕೊಡಗು: ಕಟುಕರ ಗುಂಡೇಟಿಗೆ ಹಸುಗಳೆರಡು ಬಲಿಯಾಗಿರುವ ಅಮಾನವೀಯ ಘಟನೆ ಕೊಡಗಿನ ಬ್ರೂಕ್​ ವ್ಯೂ ಎಸ್ಟೇಟ್​ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ತೋಟದ ಹಸುಗಳನ್ನು ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿರುವ ಎಸ್ಟೇಟ್​ನಲ್ಲಿ ಮೇಯಲು ಬಿಡಲಾಗಿತ್ತು. ಈ ವೇಳೆ ಕಟುಕರು ಗುಂಡಿನ ದಾಳಿ ನಡೆಸಿದ್ದು, ಮೂಕ ಪ್ರಾಣಿಗಳು ಸ್ಥಳದಲ್ಲೇ ಅಸುನೀಗಿವೆ.

ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net