ಸಿದ್ದರಾಮಯ್ಯ ಕೊಡಗಿಗೆ ಬರದಂತೆ 'ಗೋ ಬ್ಯಾಕ್' ಅಭಿಯಾನ; ಟಿಪ್ಪು ಶಿಷ್ಯ ಎಂದು ಬಿಜೆಪಿ ಕಾರ್ಯಕರ್ತರ ಆಕ್ರೋಶ..

Siddaramaiah
Published on

ಕೊಡಗು: ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟು ಮಾಡುವ ಬೆಳವಣಿಗೆಯೊಂದು ರಾಜ್ಯದಲ್ಲಿ ಗೋಚರಿಸಿದ್ದು, ಆ ಸಂಬಂಧಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಆರಂಭವಾಗಿದೆ.

ನಾಳೆ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಲಿರುವ ಕಾರ್ಯಕ್ರಮ ನಿಗದಿತಗೊಂಡಿದೆ. ಆದರೆ ಅವರು ಬರಬಾರದು ಎಂದು ಕೊಡಗಿನಲ್ಲಿ ವಿರೋಧ ವ್ಯಕ್ತವಾಗಿದ್ದು, ಬರಬೇಡಿ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೂ ನಡೆಯುತ್ತಿದೆ. ಸಿದ್ದರಾಮಯ್ಯ ಟಿಪ್ಪುವನ್ನು ಬೆಂಬಲಿಸುತ್ತಿರುವುದರಿಂದ ಈ ವಿರೋಧ ವ್ಯಕ್ತವಾಗಿದೆ.

ಸಿದ್ದರಾಮಯ್ಯ ಕೊಡಗಿಗೆ ಬರುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಟಿಪ್ಪುವಿನ ಶಿಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು, ಶಿವಮೊಗ್ಗದಲ್ಲಿ ಬೆಂಕಿ ಹಚ್ಚಿ ಕೊಡಗಿಗೆ ಏಕೆ ಬರ್ತಾರೆ ಎಂದು ಸಿದ್ದರಾಮಯ್ಯಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗೋ ಬ್ಯಾಕ್ ಎಂದು ಸೋಷಿಯಲ್ ಮೀಡಿಯಾನದಲ್ಲಿ ಸಿದ್ದು ಬರುವಿಕೆಯನ್ನು ವಿರೋಧಿಸಿ ಪೋಸ್ಟ್​ಗಳು ಹರಿದಾಡಲಾರಂಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net