ಮಲಗಿದ್ದ ತಂದೆಯನ್ನು ಕೊಡಲಿಯಿಂದ ಭೀಕರವಾಗಿ ಕೊಚ್ಚಿ ಕೊಂದ ಮಗ!

crime
Published on

ಗದಗ: ಮಲಗಿದ್ದ ತಂದೆಯನ್ನು ಮಗನೇ ಭೀಕರವಾಗಿ ಕೊಚ್ಚಿ ಕೊಂದು ಹಾಕಿರುವ ಭಯಾನಕ ಪ್ರಕರಣವೊಂದು ನಡೆದಿದೆ. ಗದಗ ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ಕೊಲೆ ಇಂದು ನಡೆದಿದೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿನ ಗಣೇಶ್​ (51) ಮಗನಿಂದ ಕೊಲೆಗೀಡಾದ ತಂದೆ. ಇವರ ಪುತ್ರ ವಿಜಯ್​ ಎಂಬಾತ ಈ ಕೊಲೆ ಮಾಡಿದ್ದಾನೆ. ತಂದೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ವಿಜಯ್ ಕೊಲೆ ಮಾಡಿದ್ದಾನೆ.

ಇಷ್ಟೊಂದು ಭೀಕರವಾಗಿ ಮಗನೇ ಕೊಲೆ ಮಾಡಲು ಕಾರಣ ಏನು ಎಂಬ ಕುರಿತು ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸದ್ಯಕ್ಕೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಎಸ್​​ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್​ಪಿ ಶಿವಾನಂದ ಅವರೊಂದಿಗೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net