ಜ್ಞಾನ ವೃದ್ಧಿಸುವ ಹಂಬಲ ಬೆಳೆಸಿಕೊಳ್ಳಿ

Katakol 000
Published on

ಕಟಕೋಳ: ವಿದ್ಯಾರ್ಥಿಗಳು ಸತತ ಅಧ್ಯಯನ, ಶಿಸ್ತು, ಶ್ರಮ, ಸಮಯದ ಮಹತ್ವ ಅರಿತುಕೊಳ್ಳಬೇಕು ಎಂದು ಶಿವಮೊಗ್ಗ ನಗರ ಪೊಲೀಸ್​ ಸಬ್​ ಇನ್ಸ್​ ಪೆಕ್ಟರ್​ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಪ್ರಜ್ವಲ್​ಕುಮಾರ ಗುರನಗೌಡರ ಹೇಳಿದರು.ಸಮೀಪದ ಚಂದರಗಿಯ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಶಾಲಾ ಪ್ರತಿನಿಧಿಗಳ ಪ್ರಮಾಣ ವಚನ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ವ್ಯವಸ್ಥಾಪಕ ಜೆ.ಬಿ.ಮೇಟಿ, ಸಿಬಿಎಸ್​ಇ ಪ್ರಾಚಾರ್ಯ ಪಾಂಡುರಂಗ ಪಾಟೀಲ, ಕನ್ನಡ ಮಾಧ್ಯಮ ಪ್ರಾಚಾರ್ಯ ಐ.ಎಸ್​.ಸೂಳಿಭಾವಿ, ಕೆ.ವಿ.ಪಮ್ಮಾರ ಇತರರಿದ್ದರು. ಶಿಕ ಎ್​.ಎಲ್​.ಮದಿಹಳ್ಳಿ ಸ್ವಾಗತಿಸಿದರು. ಎಸ್​.ಎಸ್​.ಉಮಚಗಿ ಮತ್ತು ಎಂ.ಬಿ.ವಿರಕ್ತಮಠ ಪ್ರಮಾಣ ವಚನ ಬೋಧಿಸಿದರು. ಶಿಕಿ ಜಯಶ್ರೀ ಹಿರೇಮಠ ನಿರೂಪಿಸಿದರು. ಚನ್ನಮ್ಮ ಕಾಜಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net