ಸಸ್ಯಗಳ ಪ್ರಯೋಜನ ಅರಿತರೆ ರೋಗ ಶಮನ

Mul_Benefits
Published on

ಹಳೆಯಂಗಡಿ: ನಮ್ಮ ಮನೆಯ ಪರಿಸರದಲ್ಲಿ ಬೆಳೆಯುವ ಹೆಚ್ಚಿನ ಸಸ್ಯ ಪ್ರಭೇದಗಳಲ್ಲಿ ಔಷಧೀಯ ಗುಣಗಳಿದ್ದು, ಅವುಗಳ ಬಗ್ಗೆ ತಿಳಿದುಕೊಂಡರೆ ಪ್ರಾಥಮಿಕ ಹಂತದಲ್ಲಿ ರೋಗ ರುಜಿನಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಆಯುರ್ವೇದ ತಜ್ಞ ಡಾ.ಎನ್.ಟಿ.ಅಂಚನ್ ಪಡುಬಿದ್ರಿ ಹೇಳಿದರು.

ಹಳೆಯಂಗಡಿ ನಾರಾಯಣ ಸನಿಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳೂರು ಉತ್ತರ ವಲಯ ಪ್ರೌಢಶಾಲಾ ಕೋರ್ ಶಿಕ್ಷಕರ ಸವಾಲೋಚನಾ ಸಭೆಯಲ್ಲಿ ‘ಶಿಕ್ಷಕರಿಗಾಗಿ ನಮ್ಮೂರ ಸಸ್ಯಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್‌ನ ಅಧ್ಯಕ್ಷ ಕೆ.ಶಿವಪ್ರಸಾದ್, ಪ್ರಾಂತ್ಯಾಧ್ಯಕ್ಷ ವೆಂಕಟೇಶ ಹೆಬ್ಬಾರ್ ಹಾಗೂ ಲೈನ್ ಕ್ಲಬ್ ಕರ್ನಿರೆ ಬಳ್ಕುಂಜೆ ಕಾರ್ಯದರ್ಶಿ ಸತೀಶ್ ಶುಭಕೋರಿದರು. ಮುಖ್ಯಶಿಕ್ಷಕ ಮೈಕಲ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಪಿ. ರೋಸ್ ಲೀನ್ ಲೋಬೋ ಹಾಗೂ ಸಂಪನ್ಮೂಲ ಶಿಕ್ಷಕ ಭಾಸ್ಕರ್ ಕಾಂಚನ್, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಸುಜಾತಾ ನಿರೂಪಿಸಿದರು. ಶಿಕ್ಷಕಿ ಜ್ಯೂಲಿಯೆಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net