

ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಬಿಜಿಎಸ್ ಬಾಲಜಗತ್ ಶಾಲೆಯಲ್ಲಿ ಶ್ರೀ ವಿಘ್ನೇಶ್ವರ ಪ್ರತಿಮೆ ಪ್ರತಿಷ್ಠಾಪನೆಯ 48ನೇ ದಿನದ ಪೂಜಾ ಕಾರ್ಯಕ್ರಮ ಶನಿವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಪೂಜಾ ಕಾರ್ಯಕ್ರಮ, ಪೂರ್ಣಾಹುತಿಯಲ್ಲಿ ಭಾಗವಹಿಸಿ ಶ್ರೀವಿಘ್ನೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಕ್ಕಳು ಆಟೋಟದ ಜತೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚು ಗಮನಹರಿಸಬೇಕು, ಉತ್ತಮ ಹೆಸರು ಗಳಿಸಲು ನೀವು ಕಲಿತ ವಿದ್ಯೆ ಮುಖ್ಯವಾಗುತ್ತದೆ. ಆದ್ದರಿಂದ ನಿಮ್ಮಲ್ಲಿ ಶ್ರದ್ಧೆ ಮುಖ್ಯವಾಗಿದೆ. ಜತೆಗೆ ಪ್ರತಿದಿನ ದೇವರಲ್ಲಿ ಧ್ಯಾನ ಮಾಡಬೇಕು, ಪ್ರತಿಯೊಬ್ಬ ಓಂಕಾರ ಮಹತ್ವ ತಿಳಿದುಕೊಳ್ಳುವುದಲ್ಲದೆ, ಪಠಣ ಮಾಡಬೇಕು. ಆಗ ನಿಮ್ಮ ಏಕಾಗ್ರತೆ ಹೆಚ್ಚುತ್ತದೆ ಎಂದು ತಿಳಿಸಿದರಲ್ಲದೆ, ಓಂಕಾರದ ಮಹತ್ವ ತಿಳಿಸಿದರು.
ಮೈಸೂರು ಶಾಖಾ ಮಠದ ಕಾಯದರ್ಶಿ ಶ್ರೀ ಸೋಮೇಶ್ವರಾನಂದನಾಥ ಸ್ವಾಮೀಜಿ, ಮುಖ್ಯಶಿಕ್ಷಕಿ ವಿ.ಆಶಾ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.