ಎಚ್ಡಿಕೆ ವಚನ ಭ್ರಷ್ಟ, ಅವರ ಮಾತಿಗೆ ಕಿಮ್ಮತ್ತು ಬೇಡ ಎಂದ ಕೆಎನ್ನಾರ್

KNR_Rajendra
Published on

ತುಮಕೂರು: ಚುನಾವಣೆಯಲ್ಲಿ ಸೋತರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ ವಚನ ಭ್ರಷ್ಟ. ಹಾಗಾಗಿ, ಅವರ ಮಾತಿಗೆ ಮಹತ್ವ ಬೇಡ. ಸ್ಪಷ್ಟ ಬಹುಮತ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದರು, ಆ ಮಾತುಗಳನ್ನು ಉಳಿಸಿಕೊಳ್ಳಲಿ ಎಂದು ನೂತನ ಸಚಿವ ಕೆ.ಎನ್.ರಾಜಣ್ಣ ಸವಾಲೆಸೆದರು.

ಶನಿವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಮೊದಲ ಬಾರಿ ಭೇಟಿ ನೀಡಿದ ಕೆ.ಎನ್.ರಾಜಣ್ಣ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಜೂ.1ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಗ್ಯಾರಂಟಿಗಳನ್ನು ಮನೆ ಮನೆಗೆ ಹಂಚೋಕೆ ಇದು ಎಲೆಕ್ಷನ್ ಅಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ. ಚಂದ್ರಶೇಖರ್‌ಗೌಡ, ಮಾಜಿ ಶಾಸಕ ಎಚ್.ನಿಂಗಪ್ಪ, ಮುಖಂಡರಾದ ಇಕ್ಬಾಲ್‌ಅಹ್ಮದ್, ಜಿ.ಎಚ್.ಷಣ್ಮುಖಪ್ಪ, ಕಲ್ಲಹಳ್ಳಿ ದೇವರಾಜ್, ಜಿಪಂ ಮಾಜಿ ಸದಸ್ಯೆ ಶಾಂತಲಾ, ಶಶಿಹುಲಿಕುಂಟೆ ಮಠ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net