

ಚನ್ನಪಟ್ಟಣ
ಇದೇಮೊದಲ ಬಾರಿಗೆ ತಾಲೂಕಿನ ಕನ್ನಮಂಗಲ ಬಳಿಯ ಕೆಎಂಎಫ್ ನ ಹೈಟೆಕ್ ಮೆಗಾ ಪೌಡರ್ ಪ್ಲಾಂಟ್ನಿಂದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ನಂದಿನಿ ತುಪ್ಪ ರವಾನಿಸಲಾಯಿತು.
ತುಪ್ಪ ಸರಬರಾಜು ವಾಹನಕ್ಕೆ ಬುಧವಾರ ಪೂಜೆ ಸಲ್ಲಿಸುವ ಮೂಲಕ ಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನ ಬೀಳ್ಕೊಟ್ಟರು.
ಕೆಎಂಎಫ್ ನ ಉಪ ಘಟಕವಾಗಿರುವ ಈ ಪ್ಲಾಂಟ್ನಿಂದ ಮೊದಲ ಬಾರಿಗೆ ತಿರುಮಲಕ್ಕೆ ತುಪ್ಪ ಸರಬರಾಜು ಆಗುತ್ತಿರುವುದು ವಿಶೇಷ. ಪ್ರಸಾದಕ್ಕೆ ಬಳಕೆಯಾಗುವ ತುಪ್ಪವನ್ನು ಸಿಬ್ಬಂದಿ ಶ್ರದ್ಧಾಭಕ್ತಿಯಿಂದ ಕಳಿಸಿಕೊಡುವ ಜತೆಗೆ ಸಿಹಿಹಂಚಿ ಸಂಭ್ರಮಿಸಿದರು.
ವ್ಯವಸ್ಥಾಪಕ ನಿರ್ದೇಶಕ ಗೋವಿಂದೇಗೌಡ ಮಾತನಾಡಿ, ನಮ್ಮ ಟಕದಿಂದ ತಿರುಮಲಕ್ಕೆ ನಂದಿನಿ ತುಪ್ಪ ರವಾನಿಸುತ್ತಿರುವುದು ಸಂತಸ ತಂದಿದೆ. ಸದ್ಯ ಕೆಎಂಎಫ್ ನ 350 ಟನ್ ತುಪ್ಪಕ್ಕೆ ತಿರುಮಲದಿಂದ ಬೇಡಿಕೆ ಬಂದಿದೆ. ನಮ್ಮ ಘಟಕದಿಂದ 15 ಟನ್ ತುಪ್ಪ ಕಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಎಲ್ಲ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ತಿರುಪತಿ ಲಡ್ಡುವಿಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಆರೋಪ ಬಂದ ಮೇಲೆ ಮತ್ತೆ ನಂದಿನಿ ತುಪ್ಪವನ್ನು ಕಳುಹಿಸುವಂತೆ ಟಿಟಿಡಿಯಿಂದ ಬೇಡಿಕೆ ಬಂದಿದೆ ಎಂದರು.
ಘಟಕದ ವ್ಯವಸ್ಥಾಪಕರಾದ ಚನ್ನಕೇಶವಮೂರ್ತಿ, ವಿಜಯಕುಮಾರ್, ರಾಜೇಶ್ವರಿ, ಉಪವ್ಯವಸ್ಥಾಪಕರಾದ ಸುಧಾ, ಸುರೇಶ್, ರವಿತ್ ಸೇರಿ ಹಲವರು ಉಪಸ್ಥಿತರಿದ್ದರು.