ತೊಗರಿ ನಾಡಿನ 24 ಶಿಕ್ಷಕರಿಗೆ 'ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' : ಸೆ.5 ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

Teachers' first poetry conference at Mudhol
Published on

ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಶಿಕ್ಷಕರಿಗೆ ಗೌರವ ಸಲ್ಲಿಕೆ : ಡಿಡಿಪಿಐ ಸಕ್ರೆಪ್ಪಗೌಡ

ವಿಜಯವಾಣಿ ಸುದ್ದಿಜಾಲ  ಕಲಬುರಗಿ
ಶಿಕ್ಷಕರ ದಿನಾಚರಣೆ ಮತ್ತು ಪ್ರಸಕ್ತ  ೨೦೨೨-೨೩ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ.೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಕ್ರಪ್ಪಗೌಡ ಬಿರಾದಾರ ತಿಳಿಸಿದ್ದಾರೆ.
ಪ್ರಾಥಮಿಕ ಶಾಲೆ ವಿಭಾಗದ-೧೬ ಜನ ಶಿಕ್ಷಕರಿಗೆ ಹಾಗೂ ಪ್ರೌಢ ಶಾಲಾ ವಿಭಾಗದ ೮ ಜನ ಶಿಕ್ಷಕರಿಗೆ  ಸೇರಿ ಒಟ್ಟು ೨೪ ಜನರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು. ಜಿಲ್ಲಾಧಿಕಾರಿಗಳು, ಸಿಇಒ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗ ಆಯ್ಕೆಗೊಂಡ ಶಿಕ್ಷಕರ ವಿವರ ಹೀಗಿದೆ.

ಪ್ರಾಥಮಿಕ ವಿಭಾಗ
ಆಳಂದ ತಾಲೂಕಿನ ದಣ್ಣೂರ ಸÀರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶೈಲಜಾ ಜೋಶಿ,  ಆಳಂದನ ವಿವೇಕ ವರ್ಧನಿ ಹಿರಿಯ ಪ್ರಾಥಮಿಕ ಶಾಲೆಯ  ಅಪ್ಪಾಸಾಹೇಬ ತೀರ್ಥ, ಅಫಜಲಪುರ ತಾಲೂಕಿನ ಚಿಣಮಗೇರಾ ಸÀ.ಹಿ.ಪ್ರಾ ಶಾಲೆಯ  ಲಾಲಬೀ ಎಸ್. ನದಾಫ್, ಅಫಜಲಪುರ  ಸ.ಹಿ.ಪ್ರಾ.ಉರ್ದು ಶಾಲೆಯ ಮಹ್ಮದ ಇಲಿಯಾಸ್, ಚಿತ್ತಾಪುರ ತಾಲೂಕಿನ ಬರಗಾಲಗೇರಿ ರಾವೂರ ಸ.ಕಿ.ಪ್ರಾ ಶಾಲೆಯ ಶಿವಲಿಂಗಮ್ಮ, ಚಿತ್ತಾಪುರ ತಾಲೂಕಿನ ಹೊಸೂರ ಸ.ಹಿ.ಪ್ರಾ ಶಾಲೆಯ ಮುಖ್ಯ ಗುರು ಜಗನ್ನಾಥ ಬಡಿಗೇರ, ಚಿಂಚೋಳಿ ತಾಲೂಕಿನ ಕುಂಚಾವರA ಸ.ಮಾ.ಪ್ರಾ ಶಾಲೆಯ ಮಹೇಶ ಕುಮಾರ,  ಕಲಬುರಗಿ ಉತ್ತರ ವಲಯದ ಕಮಲಾಪುರ ಸ.ಪ್ರಾ. ಶಾಲೆಯ  ನೇತ್ರಾವತಿ  ರಾಂಪುರೆ,  ವೆಂಕಟಬೇನೂರ ಸ.ಹಿ.ಪ್ರಾ ಶಾಲೆಯ ಮೃತ್ಯುಂಜಯ ಹಿರೇಮಠ,  ಕಲಬುರಗಿ ದಕ್ಷಿಣ ವಲಯದ ಇಟ್ಟಂಗಿ ಭಟ್ಟಿ ಸ.ಕಿ. ಪ್ರಾ ಶಾಲೆಯ ಬಸವರಾಜ ಸಜ್ಜನ, ಶ್ರೀನಿವಾಸ ಸರಡಗಿ ಸ.ಮಾ.ಪ್ರಾ ಶಾಲೆಯ  ತಸ್ಲಿಮಾ ವಡಗೇರಿ,  ಪಟ್ಟಣ ಸ.ಕಿ.ಪ್ರಾ ಶಾಲೆಯ  ರೇಖಾ ಡಂಬಳ, ಜೇವರ್ಗಿ ತಾಲೂಕ ಬೇಲೂರ ಸ.ಹಿ.ಪ್ರಾ ಶಾಲೆಯ ಶ್ವೇತಾ ಕಮತಗಿ, ಮುರಗಾನೂರ ಸ.ಹಿ.ಪ್ರಾ ಶಾಲೆಯ ಲಕ್ಕಪ್ಪ ಬಿರಾದಾರ, ಸೇಡಂ ತಾಲೂಕಿನ ಗಜಲಾಪುರ ಸ.ಕಿ.ಪ್ರಾ ಶಾಲೆಯ  ದೇವಿಂದ್ರಪ್ಪ ಹಾಗೂ  ಸೇಡಂ ವಾಸವದತ್ತಾ ಸ.ಹಿ. ಪ್ರಾ ಶಾಲೆಯ ಪ್ರೇಮಿಳಾ ಅವರು ಪ್ರಾಥಮಿಕ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ಪ್ರೌಢ ಶಾಲಾ ವಿಭಾಗ
 ಆಳಂದ ತಾಲೂಕಿನ ಗೋಳಾ (ಬಿ) ಸ. ಪ್ರೌಢ ಶಾಲೆಯ  ಶಿಕ್ಷಕ ಶರಣಬಸಪ್ಪ ಬಿರಾದಾರ, ಅಫಜಲಪುರ ತಾಲೂಕಿನ ಭೈರಾಮಾಡಗಿ ಸ.ಪ್ರೌ.ಶಾಲೆಯ  ವಾಣಿಶ್ರೀ ಕುಲಕರ್ಣಿ, ಕಲಬುರಗಿ ಉತ್ತರ ವಲಯ ಮಹಾಗಾಂವ ಸ.ಪ್ರೌ.ಶಾಲೆಯ  ಪ್ರಭು ನಾಯಕ, ಕಲಬುರಗಿಯ ಆದರ್ಶ ನಗರ ಕೆಸಿಡಿಇಡಿಟಿ ಬಾಲಕಿಯರ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ಸಿದ್ದಪ್ಪ  ಶರಣಪ್ಪ, ಕಲಬುರಗಿ ದಕ್ಷಿಣ ವಲಯದ ಫರಹತಾಬಾದ  ಸ.ಪ್ರೌ.ಶಾಲೆಯ ಸಂತೋಷಕುಮಾರ ಹೂಗಾರ, ಹಡಗಿಲ ಹಾರೂತಿ ಸ.ಪ್ರೌ.ಶಾಲೆಯ  ದೈಹಿಕ ಶಿಕ್ಷಕಿ ಶ್ರೀದೇವಿ ಕಟ್ಟಿಮನಿ, ಜೇವರ್ಗಿ ತಾಲೂಕಿನ ಕೂಡಿ ದರ್ಗಾ ಸ.ಪ್ರೌ ಶಾಲೆಯ ಡಾ.ಇಂದುಮತಿ ರಾಠೋಡ ಹಾಗೂ ಸೇಡಂ ತಾಲೂಕಿನ ಜಾಕನಪಲ್ಲಿ ಸ.ಪ್ರೌ ಶಾಲೆಯ ಜಗನ್ನಾಥ ಯಾಕಾಪುರ  ಇವರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net