ಕೆಕೆಆರ್ ಡಿಬಿ ಸಭೆ 29 ರಂದು

16KLB KKRDB-1
Published on

ಕಲಬುರಗಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನೂತನ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಭೆಯ ಆ.29 ರಂದು ಕಲಬುರಗಿಯಲ್ಲಿ ಇರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ನಡೆಸಲಿದೆ.

ಮಂಡಳಿಯ ಅಧ್ಯಕ್ಷರಾದ .ಅಜಯಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ‌ ನಡೆಯಲಿದೆ.

ಮಂಡಳಿಗೆ ಅಧ್ಯಕ್ಷರ ಜತೆಗೆ ೧೦ ಜನ ಶಾಸಕರನ್ನು ಸಹ ಸದಸ್ಯರನ್ನಾಗಿ  ಸರ್ಕಾರ ನೇಮಕ ಮಾಡಿದೆ. ಈ ಭಾಗದ ಎಂಟು ಜನ ಸಚಿವರು ಸೇರಿಕೊಂಡು ಸಮಾಲೋಚನೆ ನಡೆಸಿದ್ದಾರೆ. ಮೊದಲ ಸಭೆಯಲ್ಲಿ, ಶಾಸಕರಿಂದ ಮಾಹಿತಿಯಂತೆ ಕ್ರಿಯಾ ಯೋಜನೆ ಸಿದ್ದಪಡಿಸುವ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ.

ಸಭೆಯಲ್ಲಿ ರೂಪಿಸುವ ಸಮಗ್ರ ಕ್ರಿಯಾ ಯೋಜನೆಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಇನ್ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ಮಂಡಳಿ ಸಭೆ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net