

ತಾವರಗೇರಾ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಆವರಣದ ದೊಡ್ಡ ಗಾತ್ರದ ಬಂಡೆಗೆ ಸಣ್ಣ ಕಲ್ಲಿನಿಂದ ಬಾರಿಸಿದಾಗ ವಿವಿಧ ಸಂಗೀತ ಸ್ವರಗಳು ಕೇಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಪ್ರಾಚಾರ್ಯ ನಾಗರಾಜ ಅವರು ವಿಸ್ಮಯಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಬಂಡೆಗೆ ಬಾರಿಸಿದಾಗ ತಾಮ್ರದ ತಾಟಿಗೆ ಹಾಗೂ ಕಂಚಿನ ಪಾತ್ರೆಯ ಶಬ್ಧ ಬರುತ್ತಿರುವುದು ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ.
ಹಂಪಿಯ ವಿಜಯ ವಿಠ್ಠಲ ದೇವಾಲಯದ ಕಲ್ಲಿನ ಕಂಬಗಳಲ್ಲಿ ಬಾರಿಸಿದಾಗ ವಿವಿಧ ಸಂಗೀತ ಸ್ವರಗಳು ಕೇಳಿಸುತ್ತವೆ. ಈಗ ಅದೇ ತರನಾಗಿ ಸಂಗೀತ ಕೇಳಿಸುತ್ತಿರುವುದು ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗ ಸೇರಿದಂತೆ ಸಿಬ್ಬಂದಿಗೆ ಕುತೂಹಲ ಮೂಡಿಸಿದೆೆ. ಭೂ ಗರ್ಭ ಇಲಾಖೆಯ ವಿಜ್ಞಾನಿಗಳು ಕಾರಣ ಏನು ಎಂಬುದನ್ನು ಬಹಿರಂಗ ಪಡಿಸಬೇಕಾಗಿದೆ.
ಇದನ್ನೂ ಓದಿ: ಧಾರ್ಮಿಕ ಕಾರ್ಯಕ್ರಮ, ದೇಸಿ ಆಟಕ್ಕೆ ಆದ್ಯತೆ