More

    ಧಾರ್ಮಿಕ ಕಾರ್ಯಕ್ರಮ, ದೇಸಿ ಆಟಕ್ಕೆ ಆದ್ಯತೆ

    ಗಂಗಾವತಿ: ನಗರದ ಭಾವೈಕ್ಯ ಕೇಂದ್ರ ಮತ್ತು ಆರಾಧ್ಯ ದೈವ ಹಜರತ್ ಕರ್ನೂಲ್ ಬಾಬಾ ದರ್ಗಾದ 38ನೇ ವರ್ಷದ ಉರುಸು ಏ ಷರೀಫ್ ನಿಮಿತ್ತ ಕುಸ್ತಿ ಮುಕ್ತ ಪಂದ್ಯಾವಳಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

    ಸರ್ವ ಸಮುದಾಯದ ಭಕ್ತಿ ಕೇಂದ್ರವಾಗಿರುವ ಕರ್ನೂಲ್ ಬಾಬಾ ದರ್ಗಾದಲ್ಲಿ ಉರುಸು ಏ ಷರೀಫ್ ಆರಂಭವಾಗಿದ್ದು, ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಉರುಸು ಸಮಾರೋಪ ಹಿನ್ನೆಲೆಯಲ್ಲಿ ಮಸೀದಿ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ಹಮ್ಮಿಕೊಂಡಿದ್ದು, ವಿವಿಧ ಜಿಲ್ಲೆಯ 15 ಪೈಲ್ವಾನ್‌ರು ಭಾಗವಹಿಸಿದ್ದರು.
    ಪಂದ್ಯಾವಳಿಗೆ ಚಾಲನೆ ನೀಡಿದ ನಗರಸಭೆ ಸದಸ್ಯ ಹಾಗೂ ಬೇರೂನಿ ಮಸೀದಿ ಅಧ್ಯಕ್ಷ ಶಾಮೀದ್ ಮನಿಯಾರ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮದ ಜತೆಗೆ ದೇಸಿ ಆಟಕ್ಕೂ ಆದ್ಯತೆ ನೀಡಲಾಗಿದೆ ಎಂದರು.

    ಪಂದ್ಯಾವಳಿಯಲ್ಲಿ ವಿಜೇತರಾದ ಹರಪನಹಳ್ಳಿಯ ಪೈಲ್ವಾನ್ ಇಸಾಕ್ ಅಹ್ಮದ್‌ಗೆ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು. ಕಮೀಟಿ ಉಪಾಧ್ಯಕ್ಷ ಅಯೂಬ್ ಖಾನ್, ಕಾಂಗ್ರೆಸ್ ಯೂತ್ ಅಧ್ಯಕ್ಷ ಆಸ್ಿ ಹುಸೇನ್, ಉದ್ಯಮಿ ಬಾಬಾ, ಪೈಲ್ವಾನರಾದ ಸೊಲ್ಲಾಪುರದ ರಸೂಲ್, ಕಲಬುರ್ಗಿಯ ಸಿದ್ದಪ್ಪ ಇತರರಿದ್ದರು.

    ದರ್ಗಾಕ್ಕೆ ಭೇಟಿ

    ಉರುಸು ಹಿನ್ನೆಲೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ದರ್ಗಾಕ್ಕೆ ಭೇಟಿ ನೀಡಿ, ದರುಶನ ಪಡೆದುಕೊಂಡರು. ಸಂಪ್ರದಾಯದಂತೆ ಚಾದರ್ ನೀಡುವ ಮೂಲಕ ಹರಕೆ ಸಲ್ಲಿಸಿದರು. ಮುಖಂಡರಾದ ಸೈಯದ್ ಅಲಿ, ಜಿನ್ನಾಸಾಬ್, ನೂರುಲ್ಲಾಖಾದ್ರಿ, ಪಂಪಾಪತಿ ಸಿಂಗನಾಳ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts