More

    ದಮನಿತ ಸಮುದಾಯಗಳಿಗೆ ಅಂಬೇಡ್ಕರ್ ಬೆಳಕು

    ಗಂಗಾವತಿ: ಎಲ್ಲ ವರ್ಗದವರಿಗೂ ಹಕ್ಕುಗಳು ದೊರೆಯುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದ್ದು, ಮೇಲ್ವರ್ಗದವರಿಗೂ ಸೌಲಭ್ಯ ಪಡೆಯುವ ಅವಕಾಶಗಳಿವೆ ಎಂದು ಪ್ರಗತಿಪರ ಚಿಂತಕ ರಮೇಶ ಸುಗ್ಗೇನಹಳ್ಳಿ ಹೇಳಿದರು.

    ನಗರದ ಕೃಷ್ಣಾ ಸಭಾಂಗಣದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕು ಘಟಕ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಂಬೇಡ್ಕರ್ ಅವರು ಮೀಸಲಾತಿಯನ್ನು ಎಸ್‌ಸಿ, ಎಸ್ಟಿ ಮತ್ತು ಒಬಿಸಿ ವರ್ಗದವರಿಗೆ ಅನ್ವಯವಾಗುವಂತೆ ರೂಪಿಸಿಲ್ಲ. ಶೋಷಣೆ ಮುಕ್ತ ಸಮಾಜವನ್ನು ಎಚ್ಚರಗೊಳಿಸಿ, ದಮನಿತ ಸಮುದಾಯಗಳಿಗೆ ಬೆಳಕಾಗಿದ್ದಾರೆ. ದೇಶ ವಿದೇಶಗಳಲ್ಲಿ ಅಧ್ಯಯನ ಮಾಡಿ, ಭಾರತೀಯರಿಗೆ ಸಂವಿಧಾನ ಸಮರ್ಪಿಸಿದ್ದಾರೆ. ಮೀಸಲು ಕಲ್ಪಿಸುವ ಮೂಲಕ ಶೋಷಿತ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣರಾಗಿದ್ದಾರೆ ಎಂದರು.

    ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವೇದಿಕೆ ಅಧ್ಯಕ್ಷ ಎಸ್.ವೆಂಕಟೇಶ, ಜಿಲ್ಲಾಧ್ಯಕ್ಷ ಎಚ್. ವಸಂತಕುಮಾರ, ಮಾಧ್ಯಮ ಸಲಹೆಗಾರ ಆರ್.ಚನ್ನಬಸವ ಮಾನ್ವಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಕ್ಷ್ಮಣ ಜಾನೆಕಲ್, ರಮೇಶ ಗಬ್ಬೂರು, ಕೆ. ನಿಂಗಜ್ಜ, ಕಟ್ಟಿಮನಿ ಶಂಕರ ನಂದಿಹಾಳ, ಕಾಶೀನಾಥ ಕುರುಡಿ, ರಮೇಶ, ಹಂಪೇಶ ಹರಿಗೋಲು, ಚನ್ನಬಸವ, ಮಾಕರ್ಂಡೇಯ, ರಮೇಶ ಕಾಳಿ, ಶ್ರೀನಿವಾಸ ದೇವಿಕೇರಿ, ಕೆ.ಮರಿಸ್ವಾಮಿ, ಆರ್.ಟಿ.ನಾಗರಾಜ, ಕೆ.ಬಾಲಪ್ಪ, ಶಾಂತಕುಮಾರ, ಬಸವರಾಜ ಕಲ್ಗುಡಿ, ಶಂಕರಸಿಂಗ್, ಹುಸೇನಪ್ಪ ಹಂಚಿನಾಳ, ಹುಲುಗಪ್ಪ ಮಾಸ್ತರ, ವೀರೇಶ ಆರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts