ಕಿತ್ತೂರು ರಾಣಿ ಚನ್ನಮ್ಮ 200ನೇ ಜಯಂತಿ: ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ

kitturu chennamma (FILEminimizer)
Published on

ಬೆಂಗಳೂರು ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಅವರ 200ನೇ ವರ್ಷದ ವಿಜಯೋತ್ಸವ ನಿಮಿತ್ತ ಶಾಲಾ ಮಕ್ಕಳಿಗೆ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆಯ 4 ವಿಭಾಗಗಳಲ್ಲಿ ತಲಾ ಪ್ರಥಮ, ದ್ವಿತೀಯ, ತೃತೀಯ ವಿಭಾಗದಲ್ಲಿ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅ.25ರಂದು ನಡೆಯುವ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಹಾಜರಿರುವಂತೆ ಪ್ರೌಢಶಾಲಾ ನಿರ್ದೇಶಕರು ಎಲ್ಲ ಡಿಡಿಪಿಐ ಮತ್ತು ಬಿಇಒ ಗಳಿಗೆ ನಿರ್ದೇಶನ ನೀಡಿದ್ದಾರೆ.

ಸೆ.23ರಿಂದ 30ರವೆಗೆ ಪ್ರಥಮ ಸಂಕಲಾತ್ಮಕ ಮೌಲ್ಯಮಾಪನ ಚಟುವಟಿಕೆಗಳು ನಡೆಯುತ್ತಿರುವ ಕಾರಣ ಶಾಲಾ ಹಂತದಲ್ಲಿ ಈ ಸ್ಪರ್ಧೆಯನ್ನು ಸೆ.30ರೊಳಗೆ ಯಾವುದಾದರೂ ಒಂದು ದಿನ ಸಮಯ ಮಾಡಿಕೊಂಡು ಸ್ಪರ್ಧೆ ನಡೆಸುವಂತೆ ತಿಳಿಸಲಾಗಿದೆ.

10ನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಗೆ ಸಿದ್ಧತೆ ನಡೆಸುವುದರಿಂದ ಸ್ಪರ್ಧೆಯಿಂದ ಹೊರಗಿಡಲಾಗಿದೆ. 6ರಿಂದ 8ನೇ ತರಗತಿ ಮಕ್ಕಳಿಗೆ ‘ಕಿತ್ತೂರು ರಾಣಿ ಚನ್ನಮ್ಮ ಅವರ ಜೀವನ ಚರಿತ್ರೆ ಮತ್ತು ಸಾಧನೆಗಳು’, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ‘ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರ ರಾಣಿ ಚನ್ನಮ್ಮಹಾಗೂ ಸಹಚರರ ಪಾತ್ರ’ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ನಡೆಸುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net