ಕಿಷ್ಕಿಂಧಾ ಹೊಸ ಜಿಲ್ಲೆ ಅಸ್ತಿತ್ವಕ್ಕಾಗಿ ಜಾಗೃತಿ

ಗಂಗಾವತಿ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಗಂಗಾವತಿ ಕೇಂದ್ರವಾಗಿರಿಸಿ ಕಿಷ್ಕಿಂಧಾ ಹೊಸ ಜಿಲ್ಲೆ ಸೃಷ್ಟಿ ಕುರಿತು ಶನಿವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿವಿಧ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿರುವುದು.
ಗಂಗಾವತಿ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಗಂಗಾವತಿ ಕೇಂದ್ರವಾಗಿರಿಸಿ ಕಿಷ್ಕಿಂಧಾ ಹೊಸ ಜಿಲ್ಲೆ ಸೃಷ್ಟಿ ಕುರಿತು ಶನಿವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿವಿಧ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿರುವುದು.
Published on

ಗಂಗಾವತಿ: ಗಂಗಾವತಿ ಕೇಂದ್ರವಾಗಿರಿಸಿ ಕಿಷ್ಕಿಂಧಾ ಹೊಸ ಜಿಲ್ಲೆ ಸೃಷ್ಟಿ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆತಿದ್ದು, ನಾಲ್ಕು ಕೇಂದ್ರಗಳಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಹೊಸ ಜಿಲ್ಲೆಗಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಜನಾಂದೋಲನಕ್ಕಾಗಿ ಲಿಟಲ್ ಹಾರ್ಟ್ಸ್ ಶಾಲೆ, ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಪಬ್ಲಿಕ್ ಸ್ಕೂಲ್, ಕನಕಗಿರಿ ಎಕ್ಸೆಲ್ ಪಬ್ಲಿಕ್ ಸ್ಕೂಲ್ ಮತ್ತು ಕಂಪ್ಲಿ ಬ್ರೈಟ್‌ವೇ ಸ್ಕೂಲ್ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ

ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ 12 ಸಾರ್ವಜನಿಕರು, 352 ವಿದ್ಯಾರ್ಥಿಗಳು, ಶ್ರೀರಾಮನಗರದ ಪಬ್ಲಿಕ್ ಸ್ಕೂಲ್ 11 ಸಾರ್ವಜನಿಕರು ಮತ್ತು 116 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕನಕಗಿರಿ ಎಕ್ಸೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ 15 ವಿದ್ಯಾರ್ಥಿಗಳು ಮತ್ತು ಕಂಪ್ಲಿಯ ಬ್ರೈಟ್‌ವೇ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 63 ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಬಂಧ ಬರೆದರು.

ಪರೀಕ್ಷೆ ಸಂಯೋಜಕ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಕಿಷ್ಕಿಂಧಾ ಜಿಲ್ಲೆಯ ಅಸ್ತಿತ್ವದ ಬಗ್ಗೆ ಮಕ್ಕಳಲ್ಲೂ ಜಾಗೃತಿ ಮೂಡಿಸಿದ್ದು, ಆಯ್ದ ಪ್ರಬಂಧಗಳಿಗೆ ನಗದು ಮತ್ತು ಪಾರಿತೋಷಕ ನೀಡಲಾಗುವುದು. ನಾಲ್ಕು ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆದ ಸ್ಪರ್ಧೆಯಲ್ಲಿ ಉತ್ತಮ ರೀತಿಯಲ್ಲಿ ಸ್ಪಂದನೆ ದೊರೆತಿದ್ದು, ಪ್ರಬಂಧ ಆಧಾರದ ಮೇಲೆ ಚಳವಳಿ ರೂಪಿಸಲು ಅವಕಾಶ ದೊರೆಯಲಿದೆ ಎಂದರು. ಮುಖ್ಯಶಿಕ್ಷಕ ಎಂ.ಪ್ರಿಯಾಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net