ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕಂಗೋಡ್ಲು ಸನ್ನಿಧಿಯಲ್ಲಿ ಇಂದಿನಿಂದ ದೇಲಂಪಾಡಿ ಗಣೇಶ ತಂತ್ರಿ ನೇತೃತ್ವದಲ್ಲಿ ಕಿರುಷಷ್ಠಿ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.
ಜ.4ರಂದು ಶನಿವಾರ ಸಂಜೆ 7.30ಕ್ಕೆ ರಂಗಪೂಜೆ, ರಾತ್ರಿ 8ಕ್ಕೆ ಅತ್ತಾಳ ಪೂಜೆ, ಪ್ರಸಾದ ವಿತರಣೆ, 8.30ರಿಂದ ನೃತ್ಯ ವೈವಿಧ್ಯ ನಡೆಯಲಿದೆ. 5ರಂದು ಬೆಳಗ್ಗೆ 6ಕ್ಕೆ ಗಣಪತಿ ಹವನ, 7ಕ್ಕೆ ದೀಪಪ್ರತಿಷ್ಠಾಪನೆ, ಉಷಾ ಪೂಜೆ, ಭಜನೆ, 11ರಿಂದ ನವಕಾಭಿಷೇಕ, ಹರಿಕಥೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1ಕ್ಕೆ ಅನ್ನಸಂತರ್ಪಣೆ, ಸಂಜೆ 5ರಿಂದ ಶ್ರೀರಕ್ತೇಶ್ವರಿ ತಂಬಿಲ, ಭಜನೆ, 6ರಿಂದ ತಾಯಂಬಕ, 7ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ 7.30ರಿಂದ ಮಹಾಪೂಜೆ, 8ಕ್ಕೆ ಶ್ರೀಭೂತಬಲಿ ಉತ್ಸವ, ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ನಡೆಯಲಿದೆ. ರಾತ್ರಿ 11ರಿಂದ ಶ್ರೀವಿಷ್ಣುಮೂರ್ತಿ ದೈವದ ತೊಡಂಙಲ್, ಸೋಮವಾರ ಬೆಳಗ್ಗೆ 10.30ಕ್ಕೆ ಶ್ರೀವಿಷ್ಣುಮೂರ್ತಿ ದೈವಕೋಲ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಭಂಡಾರ ತೆರಳಲಿದೆ.
ಜ.27ರಂದು ಬೆಳಗ್ಗೆ 6ಕ್ಕೆ ಗಣಪತಿಹೋಮ, 11ಕ್ಕೆ ನವಕಾಭಿಷೇಕ, 11.30ಕ್ಕೆ ರಕ್ತೇಶ್ವರಿ ತಂಬಿಲ ಸೇವೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ 7ಕ್ಕೆ ಕಾರ್ತಿಕೋತ್ಸವ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.