

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (ಆರ್‌ಜಿಯುಎಚ್‌ಎಸ್) ಇತ್ತೀಚೆಗೆ ನಡೆದ 10ನೇ ಸೆನೆಟ್ (2024-27) ಚುನಾವಣೆ ಲಿತಾಂಶ ಪ್ರಕಟಗೊಂಡಿದ್ದು, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ. ಕೆ. ಕಿರಣ್ ಕುಮಾರ್ ಸೇರಿ ಹತ್ತು ಸದಸ್ಯರು ಆಯ್ಕೆಯಾಗಿದ್ದಾರೆ. ಆರ್‌ಜಿಯುಎಚ್‌ಎಸ್ 1994ರ ಸೆಕ್ಷನ್ 21(1) (್ಡಜಿ)ಅಡಿ ಡಾ. ಎಲ್.ಡಿ. ಶ್ರೀನಿವಾಸ್, ಡಾ. ಜೆ.ಬಿ. ಕೋನರೆಡ್ಡಿ, ಡಾ. ಎಸ್.ನವೀನ್, ವೈಶಾಲಿ ಶ್ರೀಜಿತ್ ಮತ್ತು ಡಾ. ಎಚ್.ಸಿ.ಶಶಿಕುಮಾರ್ ಹಾಗೂ 1994ರ ಸೆಕ್ಷನ್ 21 (1) (್ಡಜಿಜಿ) ಅಡಿ ಡಾ. ವೀರೇಶ ಕರಬಸಪ್ಪ ಹಂಚಿನಾಳ್, ಮೆಲ್ಬನ್ ಮೈಕೆಲ್ ಅರಕಲ್, ಡಾ. ಕೆ.ಕಿರಣ್ ಕುಮಾರ್, ಡಾ. ಎಸ್.ಮಹೇಂದ್ರ ಮತ್ತು ಸಂತೋಷ್ ಸುಬಾಸ್ ಇಂಡಿ ಚುನಾಯಿತರಾಗಿದ್ದಾರೆ.
ಸೆನೆಟ್‌ಗೆ ಚುನಾಯಿತರಾಗಿರುವ ಈ ಸದಸ್ಯರ ಅವಧಿಯು ಮುಂದಿನ ಮರುಸಂಘಟನೆಯವರೆಗೆ ಆಥವಾ ಮುಂದಿನ ಆದೇಶಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಆರ್‌ಜಿಯುಎಚ್‌ಎಸ್‌ನ ರಿಜಿಸ್ಟ್ರಾರ್ ತಿಳಿಸಿದ್ದಾರೆ.