

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆರೋಗ್ಯ ಸೇವೆಯನ್ನು ಬಲಪಡಿಸಲು ಭಾರತೀಯ ಜೀವ ವಿಮಾ ನಿಗಮದ (ಬೆಂ. ವಲಯ-2) ಸುವರ್ಣ ಮಹೋತ್ಸವ ೌಂಡೇಷನ್ ಒಂದು ಕೋಟಿ ರೂ. ಆರ್ಥಿಕ ನೆರವು ನೀಡಿದೆ.
ಸಂಸ್ಥೆಯ ಅಸ್ತಿಮಜ್ಜೆ ಕಸಿ (ಬೋನ್‌ಮ್ಯಾರೋ ಟ್ರಾನ್ಸ್‌ಪ್ಲಾಂಟ್) ಘಟಕವು ಇತ್ತೀಚೆಗಷ್ಟೇ 100 ಯಶಸ್ವಿ ಅಸ್ತಿಮಜ್ಜೆ ಕಸಿ ಶಸಚಿಕಿತ್ಸೆ ಪೂರ್ಣಗೊಳಿಸಿದೆ. ಸಂಸ್ಥೆಯ ಈ ಮಹತ್ತರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿಗಮವು ಒಂದು ಕೋಟಿ ರೂ. ನೆರವು ನೀಡಿದೆ. ಈ ಸಂಬಂಧ ಸಂಸ್ಥೆಯ ಆಡಳಿತಾಧಿಕಾರಿ ಡಾ. ವೈ.ನವೀನ್ ಭಟ್ ಹಾಗೂ ನಿಗಮದ ಹೈದರಾಬಾದ್ ದಕ್ಷಿಣ ವಲಯದ ಪ್ರಾದೇಶಿಕ ವ್ಯವಸ್ಥಾಪಕ ಜಿ.ವಿ. ರಾಮಯ್ಯ ಅವರು ಸೋಮವಾರ ಪ್ರೋತ್ಸಾಹಧನ ಪತ್ರಕ್ಕೆ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು.
ಎಲ್‌ಐಸಿಯ ಸಂಸ್ಥೆಗೆ ನೀಡುತ್ತಿರುವ ಈ ಪ್ರೋತ್ಸಾಹಕ್ಕೆ ಸಂಸ್ಥೆಯ ಆಡಳಿತಾಧಿಕಾರಿ ಡಾ. ವೈ.ನವೀನ್ ಭಟ್ ಶ್ಲಾಘನೆ ವ್ಯಕ್ತಪಡಿಸಿದರು. ಇದೇ ವೇಳೆ ಬಡ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಗೆ ಎಲ್‌ಐಸಿ ನಿರಂತರ ಪ್ರೋತ್ಸಾಹ ನೀಡಲಿದೆ ಎಂದು ಜಿ.ವಿ. ರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಎಲ್‌ಐಸಿ ಬೆಂಗಳೂರು ದಕ್ಷಿಣ ಕೇಂದ್ರ ವಲಯದ ಪ್ರಾದೇಶಿಕ ವ್ಯವಸ್ಥಾಪಕ (ಮಾರುಕಟ್ಟೆ ವಿಭಾಗ) ರವಿಕುಮಾರ್, ಎಲ್‌ಐಸಿ ದಕ್ಷಿಣ ಕೇಂದ್ರ ವಿಭಾಗದ ವಲಯ ವ್ಯವಸ್ಥಾಪಕ ಪುನೀತ್ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಟಿ.ನವೀನ್, ವೈದ್ಯಕೀಯ ಗಂಥಿ ಶಾಸ ವಿಭಾಗದದ ಮುಖ್ಯಸ್ಥ ಡಾ. ಸುರೇಶ್ ಬಾಬು ಇತರರು ಇದ್ದರು.