ಯುವಕನ ಅಪಹರಿಸಿ ಹಲ್ಲೆ, ಒತ್ತೆಹಣಕ್ಕಾಗಿ ಬೇಡಿಕೆ : ನಾಲ್ಕು ಮಂದಿ ವಿರುದ್ಧ ಪ್ರಕರಣ

kidnap
Published on

ಕಾಸರಗೋಡು: ಉಪ್ಪಳದಲ್ಲಿ ಕೊಟೇಶನ್ ತಂಡವೊಂದು ಯುವಕನನ್ನು ನಗ್ನಗೊಳಿಸಿ, ಹಲ್ಲೆಗೈದು ಪರ್ಸ್ ಹಾಗೂ ಮೊಬೈಲ್ ಕಸಿದು ಕಾರಿನೊಂದಿಗೆ ಪರಾರಿಯಾಗಿದೆ. ತಂಡ ಯುವಕನ ನಗ್ನ ಫೊಟೋ ಪ್ರಚಾರಪಡಿಸದಿರಲು ಭಾರಿ ಮೊತ್ತದ ಒತ್ತೆಹಣಕ್ಕಾಗಿ ಬೇಡಿಕೆಯಿರಿಸಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ನಾಲ್ವರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

ಮೊಗ್ರಾಲ್‌ಪುತ್ತೂರು ಬಳ್ಳೂರು ನಿವಾಸಿ ಶಹಲಾಬತ್(26) ಎಂಬಾತನ ದೂರಿನ ಮೇರೆಗೆ ಹನ್ಸಿ, ಉತ್ತು, ಮುಬೀನ್ ಹಾಗೂ ರಯೀಸ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ. 2024ರ ಡಿ.23ರಂದು ರಾತ್ರಿ 10ಕ್ಕೆ ಘಟನೆ ನಡೆದಿದೆ. ವ್ಯಾಪಾರಕ್ಕೆ ಸಂಬಂಧಿಸಿ ಮಾತನಾಡಲಿರುವುದಾಗಿ ತಿಳಿಸಿ ಹನ್ಸಿ ಎಂಬಾತ ಶಹಲಾಬತ್‌ನನ್ನು ಉಪ್ಪಳ ಮಣಿಮುಂಡಕ್ಕೆ ಕರೆಸಿಕೊಂಡಿದ್ದು, ಅಲ್ಲಿ ಹನ್ಸಿಯೊಂದಿಗೆ ಸೇರಿಕೊಂಡ ತಂಡ ಕಾರಿನಿಂದ ಹೊರಗೆಳೆದು ನಗ್ನನನ್ನಾಗಿಸಿ ಇದರ ವಿಡಿಯೋ ನಡೆಸಿ, ಹಲ್ಲೆಗೈದಿದೆ. ಜತೆಗೆ ಪರ್ಸ್, ಮೊಬೈಲ್ ಕಸಿದು ಪರಾರಿಯಾಗಿದೆ. ನಂತರ ವಿಡಿಯೋ ಪ್ರಚಾರ ಮಾಡದಿರಲು ಹಣ ನೀಡುವಂತೆ ಒತ್ತಾಯಿಸಿರುವುದಾಗಿ ಶಹಲಾಬತ್ ಮಂಜೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net