ಅಮೃತ ಮಹೋತ್ಸವ ಲಾಂಛನ ಬಿಡುಗಡೆ : ಮೂಡುಬಿದಿರೆ ಬಿಲ್ಲವ ಸಂಘ

New Project (30)
Published on

ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಶ್ರೀ ನಾರಾಯಣಗುರು ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕದ ಅಮೃತ ಮಹೋತ್ಸವ ಸಂಭ್ರಮ 2025 ಲಾಂಛನ ಬಿಡುಗಡೆ ಮತ್ತು ಬಾಲ ಸಂಸ್ಕಾರ ವಿಶೇಷ ಕಾರ್ಯಕ್ರಮ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆಯಿತು.

ಉದ್ಯಮಿ ನಾರಾಯಣ ಪಿಎಂ ಉದ್ಘಾಟಿಸಿ, ಸಂಕುಚಿತ ಮನೋಭಾವ ಬಿಟ್ಟು ಎಲ್ಲರೂ ಒಟ್ಟುಗೂಡಿ ಅಮೃತ ಮಹೋತ್ಸವ ನಡೆಸಲು ಸಹಕರಿಸಬೇಕು ಎಂದರು.

ಪ್ರಸೂತಿ ತಜ್ಞ ಡಾ.ರಮೇಶ್ ಅಮೃತ ಮಹೋತ್ಸವ ಲಾಂಛನ ಬಿಡುಗಡೆ ಮಾಡಿದರು. ಸಮಾಜದ ಯಾರೊಬ್ಬರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಸದಸ್ಯ ಪಿ.ಕೆ ರಾಜು ಪೂಜಾರಿ, ನಿರ್ದೇಶಕ ಜಗದೀಶ್ಚಂದ್ರ ಡಿ.ಕೆ., ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಷಾ ಮಧುಕರ್, ಆದ್ಯ ವಿ.ಕೆ, ಸೇವಾದಳದ ಅಧ್ಯಕ್ಷ ದಿನೇಶ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಗಿರೀಶ್ ಕುಮಾರ್ ಸ್ವಾಗತಿಸಿದರು. ಲಕ್ಷಣ್ ಪೂಜಾರಿ ವಂದಿಸಿದರು. ಶ್ರೀರಾಜ್ ಸನಿಲ್ ಹಾಗೂ ಪ್ರಜ್ವಲ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net