

ತುಮಕೂರು: ನಟಿ ರನ್ಯಾರಾವ್ಗೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಮಂಜೂರಾಗಿರುವ ಭೂಮಿಗೆ ಈವರೆಗೆ ಹಣ ಕಟ್ಟಿಲ್ಲ. ಹಾಗಾಗಿ, ಭೂಮಿ ಹಂಚಿಕೆ ಆಗಿಲ್ಲ.
ಜ.24, 2023ರಲ್ಲಿ ನಡೆದ ರಾಜ್ಯಮಟ್ಟದ "ಏಕ ಗವಾಕ್ಷಿ' ಕ್ಲಿಯರೆನ್ಸ್ ಕಮಿಟಿ ಸಭೆಯಲ್ಲಿ ರನ್ಯಾರಾವ್ ನಿರ್ದೇಶಕಿಯಾಗಿರುವ ಕ್ಸಿರೋಡಾ ಕಂಪನಿಗೆ 12 ಎಕರೆ ಜಾಗವನ್ನು ಶಿರಾ ಕೈಗಾರಿಕಾ ಪ್ರದೇಶದಲ್ಲಿ ಮಂಜೂರು ಮಾಡಲಾಗಿತ್ತು. ಆದರೆ, ಈವರೆಗೆ ಹಣ ಕಟ್ಟದೆ ಇರುವುದರಿಂದ ಭೂಮಿ ನೀಡಿಲ್ಲ ಎಂದು ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ಟಿ.ಎಸ್.ಲಕ್ಷ್ಮೀಶ "ವಿಜಯವಾಣಿ'ಗೆ ಸ್ಪಷ್ಟಪಡಿಸಿದ್ದಾರೆ.
138 ಕೋಟಿ ಬಂಡವಾಳ: ಕ್ಸಿರೋಡಾ ಇಂಡಿಯಾ ಪೆವೇಟ್ ಲಿಮಿಟೆಡ್ "ಉಕ್ಕು ಉತ್ಪಾದನಾ-ಟಿಎಂಟಿ ಬಾರ್ಸ್, ರಾಡ್ಸ್ ಮತ್ತು ಉತ್ಪನ್ನಗಳ' ಕೈಗಾರಿಕೆಯನ್ನು ಸ್ಥಾಪಿಸಲು 13.5 ಎಕರೆ ಭೂಮಿ ಕೋರಿ ಕೆಐಎಡಿಬಿಗೆ ಮನವಿ ಮಾಡಿತ್ತು. 138 ಕೋ.ರೂ., ವೆಚ್ಚದಲ್ಲಿ 160 ಜನಕ್ಕೆ ಉದ್ಯೋಗ ನೀಡುವ ಕಾರ್ಖಾನೆ ಪ್ರಾರಂಭಿಸಲು ಉದ್ದೇಶ ಹೊಂದಿರುವ ಪ್ರಾಜೆಕ್ಟ್ ಅನ್ನು ಕಂಪನಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್ಎಲ್ಎಸ್ಡಬ್ಲೂಸಿಸಿ 12 ಎಕರೆ ಜಾಗವನ್ನು ಮಾಡಿತ್ತು.