ಸಾಕಾರಗೊಳ್ಳದ ಯೋಜನೆಗೆ 70 ಲಕ್ಷ ವಿದ್ಯುತ್​ ಬಿಲ್​ !

Swamiji_Letter
Published on

* ಸಿದ್ದಗಂಗಾಮಠಕ್ಕೆ ಕೆಐಎಡಿಬಿ ನೀಡಿದ್ದ ನೊಟೀಸ್​  * ವಿದ್ಯುತ್​ ಬಿಲ್​ ಮನ್ನಾ ಮಾಡಿದ ಸಚಿವ ಎಂ.ಬಿ.ಪಾಟೀಲ್​

ತುಮಕೂರು: ಸಿದ್ಧಗಂಗಾ ಮಠ ಸೇರಿದಂತೆ ಮೂರು ಗ್ರಾಮಗಳಿಗೆ ಶಾಶ್ವತ ನೀರಿನ ಸೌಲಭ್ಯ ಒದಗಿಸಲು ಹೊನ್ನೇನಹಳ್ಳಿ ಕೆರೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಲು ಎರಡು ವರ್ಷದ ಹಿಂದೆ ಬಳಸಿದ್ದ ವಿದ್ಯುತ್​ ಬಿಲ್​ 70.31ಲಕ್ಷ ರೂ. ಕೂಡಲೇ ಪಾವತಿಸುವಂತೆ ಕೆಐಡಿಬಿ ಅಧಿಕಾರಿಗಳು ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸ್​ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.

ಸಾಕಾರವಾಗದ ಯೋಜನೆ ಹೆಸರಿನಲ್ಲಿ ಬೆಸ್ಕಾಂಗೆ ಪಾವತಿಸಬೇಕಿರುವ ಲಾಂತರ ರೂ. ವಿದ್ಯುತ್​ ಬಿಲ್​ ಬಾಕಿಯನ್ನು ಸಿದ್ಧಗಂಗಾ ಮಠದಿಂದ ವಸೂಲಿಗೆ ಮುಂದಾಗಿದ್ದ ಕೆಐಎಡಿಬಿ ಅಧಿಕಾರಿಗಳ ನಿರ್ಧಾರಕ್ಕೆ ಖುದ್ದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀಸಿದ್ಧಲಿಂಗಸ್ವಾಮೀಜಿ ಅವರೇ ಆಕ್ಷೇಪ ವ್ಯಕ್ತಪಡಿಸಿ, ನೀರನ್ನೇ ಬಳಸಿಕೊಳ್ಳದ ಯೋಜನೆಗೆ ಲಾಂತರ ರೂ. ಬಿಲ್​ ವಾಪತಿಸುವುದು ಅಸಾಧ್ಯ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುಂತೆ ಅಧಿಕಾರಿಗಳಿಗೆ ಲಿಖಿತವಾಗಿಯೇ ತಿಳಿಸಿದ್ದರು.

ಇಷ್ಟೆಲ್ಲವಾದರೂ ಸಿದ್ಧಗಂಗಾ ಮಠ ಸರ್ಕಾರದ ಜತೆ ಸಂರ್ಷಕ್ಕಿಳಿಯದೇ, ಮಾಹಿತಿಯಲ್ಲಿ ಸಾರ್ವಜನಿಕಗೊಳಿಸದೇ ತಾಳ್ಮೆಯಿಂದ ಸಂಬಂಧಪಟ್ಟ ಇಲಾಖೆಗಳ ಜತೆ ಪತ್ರ ವ್ಯವಹಾರವನ್ನಷ್ಟೇ ನಡೆಸಿತ್ತು. ಆದರೆ, ಅಧಿಕಾರಿಗಳೇ ಪದೇಪದೇ ಬಿಲ್​ ವಸೂಲಿಗೆ ಶ್ರೀಮಠಕ್ಕೆ ಭೇಟಿ ನೀಡಿದ್ದರಿಂದ ವಿಷಯ ಭಕ್ತರಿಗೆ ತಿಳಿದು ಆಕ್ರೋಶ ವ್ಯಕ್ತವಾಗಿದೆ.

ಕೂಡಲೇ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾದ ಬೆನ್ನಹಿಂದೆಯೇ ಎಚ್ಚೆತ್ತುಕೊಂಡ ಸರ್ಕಾರ ಬಿಲ್​ ಮನ್ನಾ ಮಾಡಿ ಆದೇಶಿಸಿರುವುದನ್ನು ಬೃಹತ್​ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಘೋಷಿಸುವ ಮೂಲಕ ಮಠದ ಮೇಲೆ ಬೀಳುತಿದ್ದ ಭಾರಿ ಹೊರೆಯನ್ನು ಇಳಿಸಿದರು.

ತುಮಕೂರು ಸಮೀಪದ ಹೊನ್ನೆನಹಳ್ಳಿ ಬಳಿಯಿರುವ ಪಂಪ್​ಸೆಟ್​ನಿಂದ ದೇವರಾಯಪಟ್ಟಣ ಕೆರೆಗೆ ಹೇಮಾವತಿ ನೀರು ಹರಿಸಿ ಸಿದ್ದಗಂಗಾ ಮಠ, ಮಾರನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆಯಾದರೂ ಈವರೆಗೂ ನೀರು ಬಂದಿಲ್ಲ. ಪ್ರಾಯೋಗಿಕವಾಗಿ ನೀರು ಹರಿಸಿದ್ದಾಗ ಬಳಸಿದ್ದ ವಿದ್ಯುತ್​ಗೆ 70,31,438 ರೂ. ಬಿಲ್​ ನೀಡುವಂತೆ ಅಧಿಕಾರಿಗಳು ನೋಟಿಸ್​ ನೀಡಿದ್ದರು.

ಕಳೆದ ಏಪ್ರಿಲ್​ 6 ರಂದು ಕೆಐಎಡಿಬಿ ಸಿದ್ದಗಂಗಾ ಮಠಕ್ಕೆ ಪತ್ರ ಬರೆದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ).ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರೋದ್ರಿಂದ ಈ ವಿದ್ಯುತ್​ ಬಿಲ್​ ನ್ನು ನೀವು ಭರಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಲಾಂತರ ರೂ. ವಿದ್ಯುತ್​ ಬಿಲ್​ ಕಂಡು ಸಿದ್ದಗಂಗಾ ಮಠದ ಆಡಳಿತ ಮಂಡಳಿ ಶಾಕ್​ ಆಗಿತ್ತು.

ಕೆಐಎಡಿಬಿ ನೋಟಿಸ್​ಗೆ ಏಪ್ರಿಲ್​ 15 ರಂದು ಸಿದ್ದಗಂಗಾ ಮಠದಿಂದ ಉತ್ತರ ಕೂಡ ನೀಡಲಾಗಿದ್ದು ಶ್ರೀಮಠದ ವತಿಯಿಂದ ಅಷ್ಟೋಂದು ಬಿಲ್​ ಪಾವತಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು. ಶ್ರೀಮಠದ ಮನವಿಗೂ ಕೆಐಎಡಿಬಿ ಅಧಿಕಾರಿಗಳು ಕಿವಿಗೊಡದೇ ಇದ್ದಿದ್ದರಿಂದ ಸಮಸ್ಯೆ ಪರಿಹಾರವಾಗದೇ ಆಗೆಯೇ ಉಳಿದಿತ್ತು. ಶ್ರೀಮಠಕ್ಕೆ ಪದೇಪದೇ ಭೇಟಿ ನೀಡಿ ಬಿಲ್​ ಪಾವತಿಸುವಂತೆ ಒತ್ತಾಯಿಸಿದ್ದರು.

ಎರಡು ವರ್ಷದ ಹಿಂದೆ ದೇವರಾಯಪಟ್ಟಣ ಕೆರೆಗೆ ನೀರು ಹರಿಸಲು ಪಂಪ್​ಸೆಟ್​ ಮೂಲಕ ಹರಿಸಿದ್ದರು ಆದರೆ, ಈವರೆಗೂ ಶ್ರೀಮಠಕ್ಕೆ ಒಂದು ಹನಿ ನೀರು ಬಂದಿಲ್ಲ. ಪ್ರಾಯೋಗಿಕವಾಗಿ ನೀರು ಹರಿಸಿದ್ದಾಗ ಬಳಸಿದ್ದ ವಿದ್ಯುತ್​ಗೆ 70 ಲಕ್ಷ ರೂ. ಬಿಲ್​ ನೀಡುವಂತೆ ಕೇಳಿದ್ದು ಆಘಾತವಾಗಿತ್ತು. ಕೆಎಐಡಿಬಿ ಪತ್ರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಬಜೆಟ್​ನಲ್ಲಿ ವಿಶೇಷವಾಗಿ ಅನುದಾನ ಭರಿಸುವಂತೆ ಕೋರಲು ಪತ್ರ ಬರೆಯುವಂತೆ ನಮ್ಮ ಪತ್ರದಲ್ಲಿ ತಿಳಿಸಲಾಗಿತ್ತು. ಶ್ರೀಸಿದ್ಧಲಿಂಗಸ್ವಾಮೀಜಿ ಸಿದ್ಧಗಂಗಾ ಮಠಾಧ್ಯಕ್ಷರು

ಸರ್ಕಾರದ ಯೋಜನೆಗೆ ಶ್ರೀಮಠ ಬಿಲ್​!?

ಸಿದ್ಧಗಂಗಾ ಮಠದಲ್ಲಿ ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿಗೆ ಉಂಟಾಗುತ್ತಿರುವ ತಾತ್ವರ ಮನಗಂಡ ಸರ್ಕಾರ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಸರಬರಾಜು ಮಾಡಿ ಅಲ್ಲಿಂದ ಸಿದ್ಧಗಂಗಾ ಮಠವಷ್ಟೇ ಅಲ್ಲದೇ ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಗಳಿಗೂ ನೀರು ಒದಗಿಸಲು ಯೋಜನೆಯನ್ನು ರೂಪಿಸಿ ಪ್ರಾಯೋಗಿಕವಾಗಿ ನೀರು ಕೂಡ ಎರಡು ವರ್ಷದ ಹಿಂದೆಯೇ ಹರಿದು ಸುಮ್ಮನಾಗಿದೆ. ನೀರು ಹರಿಸಲು ಬಳಸುವ ಬೃಹತ್​ ಮೋಟರ್​ಪಂಪ್​ಗಳು ಬಳಸುವ ವಿದ್ಯುತ್​ ಶುಲ್ಕವನ್ನು ಯಾರು ಭರಿಸಬೇಕು ಎಂಬ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡದಿರುವುದು ಈ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಯೋಜನೆ ಆಗಿರುವ ಕಾರಣದಿಂದ ಸರ್ಕಾರವೇ ಬಿಲ್​ ಭರಿಸಬೇಕು, ಬದಲಾಗಿ ಲಾಂತರ ರೂ. ಬಿಲ್​ ಪಾವತಿಗೆ ಸಿದ್ಧಗಂಗಾ ಮಠಕ್ಕೆ ಸೂಚಿಸುವುದು ವಿವಾದಕ್ಕೀಡಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net