ಕಾಶ್ಮೀರದ ಭಯೋತ್ಪಾದನೆ ವಿಷಯದಲ್ಲಿ ರಾಜಕೀಯ ಮಾಡದಂತೆ ಖರ್ಗೆ ತಾಕೀತು

kharge
Published on

ಬೆಂಗಳೂರು : ಎಲ್ಲಕ್ಕಿಂತ ದೇಶ ಮೊದಲು ಎಂಬುದು ಕಾಂಗ್ರೆಸ್ ಪಕ್ಷದ ನಿಲುವು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಕಾಶ್ಮೀರದಲ್ಲಿ ನಡೆದ ಉಗ್ರ ಕೃತ್ಯಕ್ಕೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲ ರೀತಿಯ ಬೆಂಬಲ ಘೋಷಿಸಿದ್ದೇವೆ. ಸರ್ವಪಕ್ಷ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಆದರೆ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದು ತಪ್ಪು. ದೇಶದ ಭವಿಷ್ಯಕ್ಕಿಂತ ಚುನಾವಣೆ ಪ್ರಚಾರ ಮುಖ್ಯನಾ ? ಇವತ್ತು ನಾನು ಇರಬಹುದು ನಾಳೆ ಇಲ್ಲದಿರಬಹುದು, ಮೋದಿ ಇವತ್ತು ಇರಬಹುದು ನಾಳೆ ಇಲ್ಲದಿರಬಹುದು. ಅಮಿತ್ ಶಾ ಇವತ್ತು ಇರಬಹುದು ನಾಳೆ ಇಲ್ಲದಿರಬಹುದು ಆದರೆ ನಾವಿರಲಿ ಇಲ್ಲದಿರಲಿ ದೇಶ ಶಾಶ್ವತ. ದೇಶ ಯಾವಾಗಲೂ ಇರುತ್ತದೆ. ದೇಶದ ಭವಿಷ್ಯಕ್ಕಾಗಿ ಎಲ್ಲ ರೀತಿಹ ಸಹಕಾರ ನೀಡುವುದಾಗಿ ಹಿಂದೆಯೂ ಹೇಳಿದ್ದೇನೆ. ಪಾಕಿಸ್ತಾನದ ವಿರುದ್ಧ ಯುದ್ಧ ಇರಲಿ, ಉಗ್ರಗಾಮಿ ಚಟುವಟಿಕೆಯ ಧಮನವಿರಲಿ ಎಲ್ಲಕ್ಕೂ ದೇಶ ಮೊದಲು ಎಂಬ ಕಾರಣಕ್ಕೆ ಬೆಂಬಲ ನೀಡಿದ್ದೇವೆ. ದೇಶದ ಹಿತದೃಷ್ಟಿಯಿಂದ ಮೀಟಿಂಗ್‌ನಲ್ಲಿ ಚರ್ಚೆಯಾದ ಅಂಶವನ್ನು ಹೊರಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಅದನ್ನ ಬಿಟ್ಟು ಬೇರೆ ರೀತಿಯಲ್ಲಿ ರಾಜಕೀಯವನ್ನು ಬೆರೆಸಿ ಬೆಳವಣಿಗೆಗಳನ್ನು ವ್ಯಾಖ್ಯಾನಿಸುವುದು ತಪ್ಪು ಎಂದು ಖರ್ಗೆ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net