

ಖಾನಾಪುರ: ತಾಲೂಕಿನಲ್ಲಿ ರಸ್ತೆ, ಕುಡಿಯುವ ನೀರು, ಸೇತುವೆ, ಶಾಲೆ ಹಾಗೂ ದೇವಾಲಯ ಸೇರಿ ವಿವಿಧ ಅಭಿವೃದ್ಧಿಗೆ ಅನುದಾನ ಒದಗಿಸಿ ಖಾನಾಪುರ ಏಳಿಗೆಗೆ ಶ್ರಮಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿ ಸೋಮವಾರ 1.5 ಕೋಟಿ ರೂ. ವೆಚ್ಚದಲ್ಲಿ ಶ್ರೀ ಸ್ವಯಂಭು ಮಾರುತಿ ಮಲಪ್ರಭಾ ಯಾತ್ರಾ ಸ್ಥಳದ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಸ್ವಯಂಭು ಮಾರುತಿ ಪೂಜೆ ನೆರವೇರಿಸಿದರು. ಕಬನಾಲಿ ಗ್ರಾಮದ ಶಿವ ದೇವಾಲಯದ ಜೀಣೋರ್ದ್ಧಾರಕ್ಕೆ 5 ಲ ರೂ. ದೇಣಿಗೆ ನೀಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನ ಸಮಿತಿ ಅಧ್ಯ ಲಕ್ಷ$್ಮಣ ಕಾಸರ್ಲೇಕರ್, ಶಿವ ಪ್ರತಿಷ್ಠಾನ ಹಿಂದುಸ್ತಾನ ರಾಜ್ಯ ಪ್ರಾಂತ ಮುಖ್ಯಾಧಿಕಾರಿ ಕಿರಣ ಗಾವಡೆ, ಗ್ರಾಪಂ ಅಧ್ಯೆ ಸರಸ್ವತಿ ಭರಂಕರ್, ಚೇತನ್ ಮನೇರಿಕರ್, ಗ್ರಾಪಂ ಸದಸ್ಯೆ ಪಾರ್ವತಿ ನಾಯಕ, ಅಪ್ಪಯ್ಯ ಕೋಡಿಲಿ, ಇಂಜನಿಯರ್ ವಿಜಯ ಕಲ್ಲೋಳಿ, ತಾಪಂ ಸಹಾಯಕ ನಿರ್ದೇಶಕ ವಿಜಯ ಕೋಲಿನ, ಪಿಡಿಒ ಎಂ.ಎಂ. ಮೊಕಾಶಿ, ಸುನೀಲ ಚಿಗುಳಕರ, ನೇತಾಜಿ ಘಾಡಿ, ಸಖರಾಮ ಧುರಿ, ನಾಣು ಗಾವಡೆ, ಪುಂಡಲೀಕ ಪಾಟೀಲ, ವಿನಾಯಕ್ ಮುತ್ಗೇಕರ್ ಇತರರಿದ್ದರು.