3 ಟನ್ ಗೋಮಾಂಸ ವಶಪಡಿಸಿಕೊಂಡ ಖಾಕಿ

29KMT1_police
Published on

ಕುಮಟಾ: ಕಂಟೇನರ್ ಲಾರಿಯಲ್ಲಿ ಅಂದಾಜು 4 ಲಕ್ಷ ರೂ. ಮೌಲ್ಯದ 3 ಟನ್ ಗೋಮಾಂಸ ಸಾಗಿಸುತ್ತಿರುವುದನ್ನು ಹೊಳೆಗದ್ದೆ ಟೋಲ್​ನ ಪೊಲೀಸ್ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ಮಂಗಳವಾರ ಪತ್ತೆ ಹಚ್ಚಿದ್ದಾರೆ. ಹೊಳೆಗದ್ದೆ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಕಂಡ ಕಂಟೇನರ್ ಲಾರಿ (ಕೆಎ25, ಸಿ-6531)ಯನ್ನು ತಡೆದು ಬಾಗಿಲು ತೆರೆದು ಪರಿಶೀಲಿಸಿದಾಗ ಟ್ರೇಗಳಲ್ಲಿ ಐಸ್ ಹಾಕಿಟ್ಟಿದ್ದ ಸುಮಾರು 3 ಟನ್​ಗಳಷ್ಟು ಗೋಮಾಂಸ ಪತ್ತೆಯಾಗಿದೆ. ತಕ್ಷಣ ಕಂಟೇನರ್ ಲಾರಿ ಚಾಲಕ ಹಾವೇರಿ ಜಿಲ್ಲೆಯ ಬಂಕಾಪುರದ ಕೊಟ್ಟಿಗೇರಿ ನಿವಾಸಿ ಮಹಮ್ಮದ ಶಾಹೀದ್ ಮರ್ದನ್​ಸಾಬ್ ಅಲ್ಲಾಪುರ (29) ನನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳಾದ ಹುಬ್ಬಳ್ಳಿಯ ಅಬ್ದುಲ್ ರಶೀದ್ ಅಲ್ಲಾಬಕ್ಷ ಬೇಪಾರಿ ಹಾಗೂ ಹಾನಗಲ್ ನಿವಾಸಿ ಕಾಶೀಫ್ ಮಸೂತಿ ಖಾನ್ ಎಂಬುವರ ಮೇಲೂ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net