ಕೀ.ವ.ಕೇಶವ ಸಾಧನಾ ಪ್ರಶಸ್ತಿ ಪ್ರದಾನ

New Project (17)
Published on

ಸುಳ್ಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮವಾಗಿ ಸಂಘ ಮಾಜಿ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಅವರ ಸಂಸ್ಕರಣೆ ಹಾಗೂ ಕೀ.ವ.ಕೇಶವ ಸಾಧನಾ ಪ್ರಶಸ್ತಿ ಪ್ರದಾನ ಸಮಾರಂಭ ಸಂಘ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ನಡೆಯಿತು.

ಭಗವದ್ಗೀತೆ ಪಾರಾಯಣದೊಂದಿಗೆ ಶ್ರೀ ಗೋಪಾಲಕೃಷ್ಣ ದೇವರ ವಿಶೇಷ ಆರಾಧನೆ ಮತ್ತು ಪೂಜಾರ್ಚನೆ ಬಳಿಕ ನಡೆದ ಸಮಾರಂಭದಲ್ಲಿ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸ್ಮರಣಾರ್ಥ ನೀಡುವ ‘ಕೀ.ವ.ಕೇಶವ ಸಾಧನಾ ಪ್ರಶಸ್ತಿ’ಯನ್ನು ಶಿಕ್ಷಣ ಕ್ಷೇತ್ರದ ಹಿರಿಯರು ಹಾಗೂ ಕಲಾವಿದರಾದ ವೆಂಕಟರಮಣ ದೇಲಂಪಾಡಿ ಅವರಿಗೆ ಪ್ರದಾನ ಮಾಡಲಾಯಿತು.

ಚಂದ್ರಶೇಖರ ಏತಡ್ಕ ಸಂಸ್ಮರಣಾ ಭಾಷಣ ಮಾಡಿದರು. ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ರಾಮಣ್ಣ ದೇಲಂಪಾಡಿ ಅಭಿನಂದನಾ ಭಾಷಣ ಮಾಡಿದರು. ಶಿವರಾಮ ಕಲ್ಲೂರಾಯ, ಅಪ್ಪಯ್ಯ ಮಣಿಯಾಣಿ, ಗೋಪಾಲ ಗೌಡ ಚಿದ್ಗಲ್ಲು, ಗೋಪಾಲಯ್ಯ ಕೋಟಿಗದ್ದೆ, ಡಾ.ಅನ್ನಪೂರ್ಣಾ ಏತ್ತಡ್ಕ, ವೆಂಕಟೇಶ್ವರಿಯಮ್ಮ ಬನಾರಿ, ಸರೋಜಿನಿ ಬನಾರಿ, ನಂದಕಿಶೋರ ಬನಾರಿ, ಪೂರ್ಣಿಮಾ ಬನಾರಿ ಮತ್ತಿತರರಿದ್ದರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅಭಿನಂದನಾ ಪತ್ರ ವಾಚಿಸಿದರು. ಈಶ್ವರಿ ಪೃಥ್ವಿ ಪ್ರಾರ್ಥಿಸಿದರು. ನಾರಾಯಣ ದೇಲಂಪಾಡಿ ನಿರೂಪಿಸಿದರು. ಎಂ.ರಮಾನಂದ ರೈ ದೇಲಂಪಾಡಿ ವಂದಿಸಿದರು.

ಶ್ರೀಕೃಷ್ಣಾರ್ಪಣ ಯಕ್ಷಗಾನಾರ್ಥರೂಪಕ

ಸಭಾ ಕಾರ್ಯಕ್ರಮ ಬಳಿಕ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಕಲ್ಪನೆಯ ಹೊಸ ಪ್ರಯೋಗ ‘ಶ್ರೀಕೃಷ್ಣಾರ್ಪಣ’ ಯಕ್ಷಗಾನಾರ್ಥರೂಪಕ ಪ್ರಸ್ತುತಿಗೊಂಡಿತು. ಶ್ರೀಕೃಷ್ಣನ ಜನನ, ಶ್ರೀಕೃಷ್ಣ್ಣಸಾರಥ್ಯ ಎಂಬ ಕಥಾ ಭಾಗವನ್ನು ಪ್ರಸ್ತುತಪಡಿಸಲಾಯಿತು. ಭಾಗವತರಾಗಿ ರಚನಾ ಚಿದ್ಗಲ್ಲು, ವಿದ್ಯಾಶ್ರೀ ಆಚಾರ್ಯ, ಮೋಹನ ಮೆಣಸಿನಕಾನ, ಚೆಂಡೆ, ಮದ್ದಳೆ, ಚಕ್ರತಾಳದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ವಿಷ್ಣುಶರಣ ಬನಾರಿ, ಶ್ರೀಧರ ಆಚಾರ್ಯ, ಕೃಷ್ಣ ಪ್ರಸಾದ, ಸದಾನಂದ ಮಯ್ಯಾಳ, ಪಾತ್ರವರ್ಗದಲ್ಲಿ ಶಾಂತಾಕುಮಾರಿ, ಶ್ರೀದೇವ್, ಡಾ.ರಮಾನಂದ ಬನಾರಿ, ನಾರಾಯಣ ದೇಲಂಪಾಡಿ, ರಾಮಣ್ಣ, ರಮಾನಂದ ರೈ ದೇಲಂಪಾಡಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net