

ಕಡಬ: ನೂಜಿಬಾಳ್ತಿಲ ಭಾರತೀಯ ಜೈನ್ ಮಿಲನ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಿರಂತರ ಅಪಪ್ರಚಾರ ನಡೆಸುತ್ತಿರುವುದಕ್ಕೆ ಖಂಡನಾ ಸಭೆ ಇಚ್ಲಂಪಾಡಿ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ನಡೆಯಿತು.
ಜೈನ್ ಮಿಲನ್‌ನ ಮುಖಂಡ ಮಹಾವೀರ ಜೈನ್ ಡೆಪ್ಪುಣಿಗುತ್ತು ಮಾತನಾಡಿ, ಅಹಿಂಸಾ ಪ್ರಿಯ ಜೈನ ಧರ್ಮದ ಬಗ್ಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ನಿಂದನೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಚ್ಲಂಪಾಡಿ ಬಸದಿ ಆಡಳಿತ ಸಮಿತಿ ಅಧ್ಯಕ್ಷ ಶುಭಾಕರ ಹೆಗ್ಗಡೆ ಹಾಗೂ ಜೈನ್ ಮಿಲನ್ ಅಧ್ಯಕ್ಷೆ ಹೇಮಾವತಿ ನೇತೃತ್ವದಲ್ಲಿ ಆಯೋಜಿಸಲಾದ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೈನ ಧರ್ಮದ ಬಗ್ಗೆ ಯಾವುದೇ ಸಾಕ್ಷಾೃಧಾರಗಳಿಲ್ಲದೆ ಕೀಳು ಮಟ್ಟದ ಆಪಾದನೆ, ನಿಂದನೆ ಮಾಡುತ್ತಿರುವುದನ್ನು ಸಾಮೂಹಿಕವಾಗಿ ಖಂಡಿಸಲಾಯಿತು.
ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ ರೆಂಜಿಲಾಡಿ ಮತ್ತಿತರರು ಉಪಸ್ಥಿತರಿದ್ದರು. ದೀಪಿಕಾ ರವೀಂದ್ರ ಆರಿಗ ಸ್ವಾಗತಿಸಿದರು. ಕೆ.ಮಹಾವೀರ ಜೈನ್ ವಂದಿಸಿದರು. ಸುಮಿತ್ರಾದೇವಿ ಯಶೋಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇಚ್ಲಂಪಾಡಿ ಮಾಗಡಿಯ ಎಲ್ಲ ಶ್ರಾವಕ- ಶ್ರಾವಕಿಯರು ಸೇರಿ ಸಾಮೂಹಿಕ ಪಂಚ ನಮಸ್ಕಾರ ಪಠಣ ಮಾಡಿದರು.