ಶಿರ್ಲಾಲು ಸಂಘದ ಕಾರ್ಯ ಶ್ಲಾಘನೀಯ : ಚಂದ್ರಶೇಖರ್ ಸೂರ್ಲೋಡಿ ಹೇಳಿಕೆ

New Project (13)
Published on

ಬೆಳ್ತಂಗಡಿ: ಸಮಾಜಮುಖಿ ಚಟುವಟಿಕೆಯೊಂದಿಗೆ ಕೆಸರು ಗದ್ದೆ ಕ್ರೀಡೆ ಆಯೋಜಿಸುತ್ತಿರುವ ಶಿರ್ಲಾಲು ಸಂಘದ ಕಾರ್ಯ ಶ್ಲಾಘನೀಯ ಎಂದು ಬೆಳ್ತಂಗಡಿ ತಾಲೂಕು ಆಸ್ಪತ್ರೆ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಸೂರ್ಲೋಡಿ ಹೇಳಿದರು.

ಶಿರ್ಲಾಲು- ಕರಂಬಾರು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವದಲ್ಲಿ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಶಿರ್ಲಾಲು ಕರಂಬಾರು ಯುವವಾಹಿನಿ ಸಂಚಲನ ಸಮಿತಿ ಸಹಕಾರದಲ್ಲಿ ‘ಕೆಸರ್ ದ ಕಂಡೊಡು ಪರ್ಬೊದ ಗೊಬ್ಬು’ ಕ್ರೀಡಾಕೂಟವನ್ನು ಕಟ್ರಬೈಲು ಆನಂದ ಪೂಜಾರಿ ಗದ್ದೆಯಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಶಿರ್ಲಾಲು-ಕರಂಬಾರು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸದಾಶಿವ ಪೂಜಾರಿ ಊರ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸುಂದರ ಪೂಜಾರಿ ಕಲ್ಲಾಜೆ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಚಿದಾನಂದ ಪೂಜಾರಿ ಎಲ್ದಕ್ಕ, ಪ್ರಶಾಂತ್ ಪಾರೆಂಕಿ, ಸುಧೀರ್ ಸುವರ್ಣ, ಆನಂದ ಪೂಜಾರಿ ಕಟ್ರಬೈಲು, ಗುರುರಾಜ್ ಗುರುಪಳ್ಳ, ಮಧುರಾ ರಾಘವ, ಅನೀಶ್ ಅಮೀನ್ ವೇಣೂರು, ಸೋಮನಾಥ ಬಳ್ಳಿದಡ್ದ, ಸಂತೋಷ್ ಕೋಟ್ಯಾನ್, ಪ್ರಸಾದ್ ಎಂ.ಕೆ., ಹರೀಶ್ ಕಲ್ಲಾಜೆ, ದಿನೇಶ್ ಕರ್ದೊಟ್ಟು, ಪ್ರವೀಣ್ ಪಾಲನೆ, ಜ್ಞಾನೇಶ್ ಕಟ್ಟ, ಶೋಭಾ ಶುಭಕರ, ಯತೀಶ್ ಪೂಜಾರಿ, ಜಯ ಪೂಜಾರಿ, ಪ್ರಕಾಶ್ ಕಟ್ರಬೈಲು, ವಿಜಯ ಹೇಡ್ಯದಡ್ಡ ಮೊದಲಾದರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net