ಗದ್ದೆಲೀ ಒಂದು ದಿನ ಕೆಸರುಗದ್ದೆ ಕ್ರೀಡಾಕೂಟ

New Project (15)
Published on

ಸುಳ್ಯ: ಕಾಸರಗೋಡು ನೆಹರೂ ಯುವ ಕೇಂದ್ರ, ಪೆರುಮುಂಡ ಕಲ್ಲಪಳ್ಳಿ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಹಾಗೂ ಪೆರುಮುಂಡ ಕಲ್ಲಪ್ಪಳ್ಳಿ ಆದರ್ಶ ಮಹಿಳಾ ಸಂಘ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಗದ್ದೆಲೀ ಒಂದು ದಿನ’ ಸಾರ್ವಜನಿಕ ಕೆಸರುಗದ್ದೆ ಕ್ರೀಡಾ ಕೂಟ ನಡೆಯಿತು. ವಿವಿಧ ಕ್ರೀಡಾ ಸ್ಪರ್ಧೆಗಳು ಪಿ.ಎಲ್.ಪರಮೇಶ್ವರ ಗೌಡ ಪೆರುಮುಂಡ ಗದ್ದೆಯಲ್ಲಿ ನಡೆಯಿತು.

ಕೃಷಿಕ ಪಿ.ಎ.ಬಾಲಕೃಷ್ಣ ನಾಯ್ಕ ಪಾಡಿಕೊಚ್ಚಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ರೀಡಾಕೂಟಕ್ಕೆ ಕೃಷಿಕ ಪರಮೇಶ್ವರ ಗೌಡ ಪಿ.ಎಲ್.ಪೆರುಮುಂಡ ಚಾಲನೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಸಂಘ ಅಧ್ಯಕ್ಷ ಕಿಶೋರ್ ಕುಮಾರ್ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಳ್ಕರ್, ಪನತ್ತಡಿ ಗ್ರಾಪಂ ಸದಸ್ಯ ರಾಧಾಕೃಷ್ಣ ಗೌಡ ಕಲ್ಲಪಳ್ಳಿ, ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ, ಆದರ್ಶ ಮಹಿಳಾ ಸಂಘ ಅಧ್ಯಕ್ಷೆ ಪುಷ್ಪಾ ಪಿ.ಕೆ. ಉಪಸ್ಥಿತರಿದ್ದರು. ದಾಮೋದರ ಪಿ.ಡಿ. ಸ್ವಾಗತಿಸಿದರು. ರಮೇಶ್ ಪಿ.ಕೆ. ನಿರೂಪಿಸಿದರು. ಜಯಪ್ರಕಾಶ್ ಪೆರುಮುಂಡ ವಂದಿಸಿದರು.

\

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net