ಮಕ್ಕಳಿಗೆ ಅಗತ್ಯ ಜೀವ ರಕ್ಷಣೆಯ ವಿದ್ಯೆ : ಈಶ್ವರ ಮಲ್ಪೆ ಅಭಿಪ್ರಾಯ

New Project (7)
Published on

ಪುತ್ತೂರು ಗ್ರಾಮಾಂತರ: ಮಕ್ಕಳಿಗೆ ಕರಾಟೆ ಮೊದಲಾದ ಜೀವ ರಕ್ಷಣೆಯ ವಿದ್ಯೆ ಕಲಿಸಿ ಕೊಡುವುದು ಇಂದಿನ ಅಗತ್ಯ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಹೇಳಿದರು.

ಅರಿಯಡ್ಕ ಗ್ರಾಮದ ಮಜ್ಜಾರಡ್ಕದ ಶ್ರೀವಿಷ್ಣು ಯುವಶಕ್ತಿ ಬಳಗದ ಆಶ್ರಯದಲ್ಲಿ ನಡೆದ 7ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಂಘಟನೆಯ ಅಧ್ಯಕ್ಷ ಸದಾಶಿವ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಪ್ರವೀಣ್ ರೈ ನಡುಕೂಟೇಲು, ಉದ್ಯಮಿ ಜನಾರ್ದನ ಪೂಜಾರಿ, ಆರೋಗ್ಯ ಸುರಕ್ಷಾ ಅಧಿಕಾರಿ ನವ್ಯಾ, ಮಂಗಳೂರು ಬಿಜೆಪಿ ಕಾರ್ಯದರ್ಶಿ ಭರತ್‌ರಾಜ್ ಶೆಟ್ಟಿ ಮತ್ತಿತರರು ಇದ್ದರು.

ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು ನೀಡಿರುವ ವೀಲ್‌ಚಯರ್ ಅನ್ನು ಈಶ್ವರ ಮಲ್ಪೆ ಅವರಿಗೆ ಹಸ್ತಾಂತರಿಸಲಾಯಿತು. ಶೋಭಿತಾ ಭಂಡಾರಿ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.

ಈಶ್ವರ್ ಮಲ್ಪೆ, ಸಮಾಜ ಸೇವಕ ಚಿಂತು ಸುಳ್ಯ, ಪುತ್ತೂರಿನ ಹಿಂದು ರುದ್ರಭೂಮಿಯ ಸೇವಕ ಪಿ.ಬಿ.ಸತೀಶ್ ಮಡಿವಾಳ, ಸಾಹಿತಿ ಮೋಹನ್ ದರ್ಬೆತ್ತಡ್ಕ, ಉದ್ಯಮಿಗಳಾದ ಶರತ್ ರೈ, ಶ್ರೀಧರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಸಂಘಟನೆಯ ಯುವ ಪ್ರಶಸ್ತಿಯನ್ನು ವಿನೋದ್ ಸ್ವಾಮಿನಗರ ಅವರಿಗೆ ಪ್ರದಾನ ಮಾಡಲಾಯಿತು.

ವಿವಿಧ ಆಟೋಟ ಸ್ಪರ್ಧೆಗಳು

ಕೆಸರುಡೊಂಜಿ ದಿನ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಪ್ರಗತಿಪರ ಕೃಷಿಕ ವಾಸು ಪೂಜಾರಿ ಚಾಲನೆ ನೀಡಿದರು. ಸಂಘಟನೆಯ ಉಪಾಧ್ಯಕ್ಷ ಸಮಿತ್ ಮಜ್ಜಾರು ಅಧ್ಯಕ್ಷತೆ ವಹಿಸಿದ್ದರು. ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷೆ ಮೀನಾಕ್ಷಿ, ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾರ್ಥಕ್ ರೈ ಪಾಪೆಮಜಲು, ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಮಲಾ ಸುರೇಶ್, ಕೆಯ್ಯೂರು ಗ್ರಾ.ಪಂ. ಸದಸ್ಯೆ ಮೀನಾಕ್ಷಿ ವಿ.ರೈ, ಸಂಘಟನೆಯ ಸದಸ್ಯ ಲೋಕನಾಥ ಪೂಜಾರಿ, ಗೌರವ ಸಲಹೆಗಾರ ತಿಮ್ಮಪ್ಪ ಪೂಜಾರಿ, ಸಂಘಟಕ ರಾಜೇಶ್ ಕೆ. ಮತ್ತಿತರರು ಇದ್ದರು. ಶ್ರೀನಿಧಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net