ಪೊಲೀಸರ ಮಧ್ಯಸ್ಥಿಕೆಯಲ್ಲಿ ಜರುಗಿದ ಕರುಗಲಮ್ಮ ದೇವಿ ಜಾತ್ರಾ ಮಹೋತ್ಸವ

Kesaramadu_Jatre
Published on

ತುಮಕೂರು: ಬೂದಿಮುಚ್ಚಿದ ಕೆಂಡದಂತಿದ್ದ ಕೆಸರಮಡು ಗ್ರಾಮದ ಶ್ರೀ ಕರುಗಲಮ್ಮ ದೇವಿ ಜಾತ್ರಾ ಮಹೋತ್ಸವವು ಶುಕ್ರವಾರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಶಾಂತಿಯುತವಾಗಿ ಜರುಗಿತು. ಪೊಲೀಸ್ ಬಂದೋಬಸ್ತ್‌ನಲ್ಲಿ ಪೂಜೆ ನೆರವೇರಿಸಲಾಗಿದೆ.

ತಾಲೂಕಿನ ಕೆಸರಮಡು ಗ್ರಾಮದ ಮಸೀದಿ ಪಕ್ಕದಲ್ಲಿರುವ ಪುರಾತನ ಶ್ರೀ ಕರುಗಲಮ್ಮ ದೇವಸ್ಥಾನದ ದೇವಿಯ ಜಾತ್ರಾ ಮಹೋತ್ಸವವನ್ನು 18 ಕೋಮಿನ ಜನರು ಮಾಡಿಕೊಂಡು ಬಂದಿದ್ದು ಸೋಮವಾರ ಜಾತ್ರೆಗೆ ಕೆಲವರು ಅಡ್ಡಿಪಡಿಸಿದ ಹಿನ್ನೆಲೆ ಉಭಯ ಕೋಮಿನವರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯ್ಲಲಿ ಜಾತ್ರಾ ಮಹೋತ್ಸವನ್ನು ಪೊಲೀಸರು ಮುಂದೂಡಿದ್ದರು.

ಎಸ್ಪಿ ಮಧ್ಯಸ್ಥಿಕೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್ ಉಭಯ ಕೋಮಿನ ಮುಖ್ಯಸ್ಥರನ್ನು ಕರೆಸಿ ಸೌಹಾರ್ದತೆ ಕಾಪಾಡಿಕೊಂಡು ಹೋಗುವಂತೆ ಬುದ್ದಿ ಹೇಳಿದ್ದು ಪರಿಸ್ಥಿತಿ ತಿಳಿಗೊಂಡಿತ್ತು. ಹಾಗಾಗಿ, ಶುಕ್ರವಾರ ಗ್ರಾಮಸ್ಥರು ಕರುಗಲಮ್ಮ ದೇವಿಗೆ ನೀರೆರೆದು ಆರತಿ ಮಾಡಿ ಹಣ್ಣು, ಉಪಾರ ತಂದು ಪ್ರಸಾದವನ್ನು ವಿತರಿಸಿ ದೇವಿಯ ಕೃಪೆಗೆ ಪಾತ್ರರಾದರು.

ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಜಾತ್ರೆಗೆ ಅವಕಾಶ ನೀಡುವಂತೆ ಗ್ರಾಮಸ್ಥರು ಎಸಿ, ತಹಸೀಲ್ದಾರ್‌ಗೂ ಮನವಿ ಸಲ್ಲಿಸಿದ್ದರು. ಈ ಸಂಬಂಧ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸುವಂತೆ ಒತ್ತಾಯ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net