ಪ್ರತ್ಯೇಕ ಸಮುದಾಯವಾಗಿ ಪರಿಗಣನೆ: ಕೇರಳ ತೀಯ ಮಹಾಸಭಾ ಜಿಲ್ಲಾ ಸಮ್ಮೇಳನ ಆಗ್ರಹ

New Project (15)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮುಂದೆ ನಡೆಯಲಿರುವ ಜಾತಿ ಗಣತಿಯಲ್ಲಿ ಮಲಬಾರಿನ 60 ಲಕ್ಷ ತೀಯ ಸಮುದಾಯದವರನ್ನು ಪ್ರತ್ಯೇಕ ಸಮುದಾಯವಾಗಿ ಸರ್ಕಾರಿ ದಾಖಲೆಗಳಲ್ಲಿ ಸೇರಿಸಬೇಕೆಂದು ಕೇರಳ ತೀಯ ಮಹಾಸಭಾ ಜಿಲ್ಲಾ ಸಮ್ಮೇಳನ ‘ಆರೂಢ-25’ ಸರ್ಕಾರವನ್ನು ಆಗ್ರಹಿಸಿದೆ.

ಕಾಸರಗೋಡಿನಲ್ಲಿ ನಡೆದ ಸಮ್ಮೇಳನದಲ್ಲಿ ಈ ಬಗ್ಗೆ ಠರಾವು ಮಂಡಿಸಲಾಯಿತು. ಸಂಟನೆ ಜಿಲ್ಲಾಧ್ಯಕ್ಷ ಪಿ.ಪಿ.ವಿಶ್ವಂಭರ ಪಣಿಕ್ಕರ್ ಧ್ವಜಾರೋಹಣ ನಡೆಸಿದರು. ಕೃಷ್ಣನ್ ಕಾರ್ನವರ್, ನಾಗೇಶ ಕಾರ್ನವರ್ ಮತ್ತು ಮಂಜು ಕಾರ್ನವರ್ ದೀಪ ಬೆಳಗಿಸಿದರು. ಸಮ್ಮೇಳನವನ್ನು ಲೇಖಕ ಪದ್ಮಶ್ರೀ ಬಾಲನ್ ಪುತ್ತೇರಿ ಉದ್ಘಾಟಿಸಿದರು. ಪಿ.ಪಿ.ವಿಶ್ವಂಭರನ್ ಪಣಿಕರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಗಣೇಶ್ ಅರಮಂಗಾನಂ ಮಾಹಿತಿ ನೀಡಿದರು. ಉತ್ತರ ಮಲಬಾರ್ ತೀಯಾ ಸಮುದಾಯ ದೇವಾಲಯ ರಕ್ಷಣಾ ಸಮಿತಿ ಅಧ್ಯಕ್ಷ ಸಿ.ರಾಜನ್ ಪೆರಿಯ ಭಾಗವಹಿಸಿದ್ದರು.

ಅಡ್ಕ ಶ್ರೀ ಭಗವತಿ ದೇವಸ್ಥಾನದ ಆಚಾರ್ಯ ಕೃಷ್ಣನ್ ಕಾರ್ನವರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವಿ.ಪ್ರಸಾದ್ ಚಟುವಟಿಕೆ ವರದಿ ಮತ್ತು ಜಿಲ್ಲಾ ಕಾರ್ಯದರ್ಶಿ ಪಿ.ಟಿ.ಹರಿಹರನ್ ನಿರ್ಣಯ ಮಂಡಿಸಿದರು. ಪ್ರಮುಖರಾದ ರಾಮನ್ ಗುರುಸ್ವಾಮಿ ಉದಯಗಿರಿ, ಡಾ.ಶೋಭಾ ಕಾಸರಗೋಡು, ಡಾ.ಅಕ್ಷಯ್ ಪ್ರಭಾಕರನ್, ಬಿಂಧು, ಟಿ.ವಿ.ಶೀಬಾ ಅವರನ್ನು ಗೌರವಿಸಲಾಯಿತು. ಮಧೂರು ಗ್ರಾಪಂ ಅಧ್ಯಕ್ಷ ಕೆ.ಗೋಪಾಲಕೃಷ್ಣನ್, ಸಂಟನಾ ಸಮಿತಿ ಅಧ್ಯಕ್ಷ ಎನ್.ಸತೀಶ್, ರಾಜ್ಯ ಸಂಯೋಜಕ ಗಣೇಶ್ ಮಾವಿನಕಟ್ಟೆ, ಪುತ್ತಿಗೆ ಗ್ರಾಪಂ ಉಪಾಧ್ಯಕ್ಷೆ ಜಯಂತಿ ಪೊನ್ನಂಗಾಲ, ಮಧೂರು ಗ್ರಾಪಂ ಸದಸ್ಯೆ ಸ್ಮಿತಾ ಸುಧಾಕರನ್ ಮೊದಲಾದವರಿದ್ದರು. ಜಿಲ್ಲಾ ಖಜಾಂಚಿ ಟಿ.ವಿ. ರಾವನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net