ಕೇರಳ ಲಾಟರಿ ಟಿಕೆಟ್ ಸಾಗಿಸುತ್ತಿದ್ದವರ ಬಂಧನ

15-kollegalphoto-5,,,
Published on

ಕೊಳ್ಳೇಗಾಲ: ಕೊಳ್ಳೇಗಾಲ ಕಡೆಗೆ ಅಕ್ರಮವಾಗಿ ಕೇರಳ ಲಾಟರಿ ಟಿಕೆಟ್ ಸಾಗಿಸುತ್ತಿದ್ದ ಇಬ್ಬರನ್ನು ಶನಿವಾರ ರಾತ್ರಿ ಪಟ್ಟಣ ಪೊಲೀಸರು ಹಾಗೂ ಡಿವೈಎಸ್ಪಿ ಅಪರಾಧ ಪತ್ತೆ ದಳ ಸಿಬ್ಬಂದಿ ಬಂಧಿಸಿದ್ದಾರೆ. ಪಟ್ಟಣದ ಮುಸ್ತಾಯಿಮ್ (50) ಹಾಗೂ ನಾಗರಾಜು (55) ಬಂಧಿತ ಆರೋಪಿಗಳು. ಇವರು ಕಾರಿನಲ್ಲಿ ಕೇರಳದಿಂದ ಕೊಳ್ಳೇಗಾಲದ ಕಡೆಗೆ ಮಾರಾಟ ಮಾಡುವ ಉದ್ದೇಶದಿಂದ ಲಾಟರಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಹಾಗೂ ಡಿವೈಎಸ್ಪಿ ಅಪರಾಧ ಪತ್ತೆ ದಳ ಸಿಬ್ಬಂದಿ ಕಾರ್ಯಾಚರಣೆಗಳಿದಿದ್ದರು. ಪಟ್ಟಣದ ಮುಡಿಗುಂಡ ಬಳಿ ಕೊಳ್ಳೇಗಾಲ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಸುಮಾರು 2 ಲಕ್ಷ ರೂ. ಮೌಲ್ಯದ ಲಾಟರಿಗಳನ್ನು ಸಾಗಿಸುತ್ತಿದ್ದ ಇಬ್ಬರು ಅರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.ದಾಳಿಯಲ್ಲಿ ಅಪರಾಧ ವಿಭಾಗದ ಎಎಸ್ ತಖೀವುಲ್ಲಾ, ಮುಖ್ಯ ಪೇದೆ ಬಿಳಿಗೌಡ, ಕಿಶೋರ್, ವೆಂಕಟೇಶ್, ಶಿವಕುಮಾರ್, ರವಿ, ರಾಜು, ಅನಿಲ, ಪಟ್ಟಣದ ಪೊಲೀಸ್ ಠಾಣೆಯ ಎಸ್.ಬಿ.ವೀರೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net