

ಕಾಸರಗೋಡು: ಕೇರಳ ಮಾರ್ಗದರ್ಶಕ ಮಂಡಳಿ ವತಿಯಿಂದ ಕಾಸರಗೋಡಿನಿಂದ ತಿರುವನಂತಪುರವರೆಗೆ ನಡೆಯಲಿರುವ ಕೇರಳ ಧರ್ಮಸಂದೇಶ ಯಾತ್ರೆಗೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಯತಿವರೇಣ್ಯರು ಸೋಮವಾರ ಚಾಲನೆ ನೀಡಿದರು.
ಮಂಗಳವಾರ ಮಧ್ಯಾಹ್ನ 3ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಿಂದ ಹೊರಡುವ ಯಾತ್ರೆ ಅ.21ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ ಎಂದು ಸ್ವಾಮಿ ಸತ್‌ಸ್ವರೂಪಾನಂದ ಸ್ವಾಮೀಜಿ ತಿಳಿಸಿದರು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಿವಿಕ್ತಾನಂದ ಸರಸ್ವತೀ, ಸಾಧು ವಿನೋದ್, ಸ್ವಾಮಿ ತತ್ವಾನಂದ ಸರಸ್ವತಿ, ವೇದವೇದಾಮೃತಾನಂದ ಚೈತನ್ಯ, ಬ್ರಹ್ಮಕುಮಾರಿ ವಿಜಯಲಕ್ಷ್ಮೀ, ಮಧುಸೂಧನ್ ಅಯರ್, ಬ್ರಹ್ಮಚಾರಿಣಿ ದಿಶಾ ಚೈತನ್ಯ ಉಪಸ್ಥಿತರಿದ್ದರು.
ಕುದ್ರೋಳಿಯಿಂದ ಕಾಸರಗೋಡಿಗೆ ತೆರಳುವ ಹಾದಿಯ ತಲಪಾಡಿಯಲ್ಲಿ ಉಪ್ಪಳ ಕೊಂಡೆವೂರು ಆಶ್ರಮದ ವತಿಯಿಂದ ಯತಿವರ್ಯರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು.