ಕೆನ್ನಾಳು ಬಾಯ್ಸ್ ತಂಡ ಪ್ರಥಮ

10 pnd 002 march
Published on

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದಲ್ಲಿ ಆಯೋಜಿಸಿರುವ ಭಾರಿ ದನಗಳ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಲಾಗಿದ್ದ ಆಹ್ವಾನಿತ ವಾಲಿಬಾಲ್ ಪಂದ್ಯದಲ್ಲಿ ಕೆನ್ನಾಳು ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.


ಪಂದ್ಯದಲ್ಲಿ ಫೈನಲ್ ಹಂತ ತಲುಪಿದ ಕೆನ್ನಾಳು ಮತ್ತು ಕಟ್ಟೇರಿ ಗ್ರಾಮದ ತಂಡಗಳು ಪರಸ್ಪರ ಸೆಣಸಾಡಿದವು. 3 ಸೆಟ್ ಪಂದ್ಯದಲ್ಲಿ ಕೆನ್ನಾಳು ತಂಡ 2 ಸೆಟ್ ಪಂದ್ಯ ಗೆದ್ದು ಕಟ್ಟೇರಿ ಗ್ರಾಮದ ತಂಡವನ್ನು ಪರಾಭವಗೊಳಿಸಿತು. ಆ ಮೂಲಕ ಕಟ್ಟೇರಿ ತಂಡ ದ್ವೀತಿಯ ಸ್ಥಾನ ಪಡೆಯಿತು.


ಆಹ್ವಾನಿತ 12 ತಂಡಗಳ ಪೈಕಿ ಕೆನ್ನಾಳು, ಕಟ್ಟೇರಿ, ಸೀತಾಪುರ ಹಾಗೂ ಪಾಂಡವಪುರ ತಂಡ ಸೆಮಿಪೈನಲ್‌ನಲ್ಲಿ ಸೆಣಸಾಡಿದವು. ಕೆನ್ನಾಳು ಮತ್ತು ಕಟ್ಟೇರಿ ತಂಡಗಳು ಫೈನಲ್ ತಲುಪಿದವು. ಸೀತಾಪುರ ಹಾಗೂ ಪಾಂಡವಪುರ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಸೀತಾಪುರ 3ನೇ ಸ್ಥಾನ ಮತ್ತು ಪಾಂಡವಪುರ 4ನೇ ಸ್ಥಾನ ಪಡೆದವು.


ವಾಲಿಬಾಲ್ ಪಂದ್ಯಾವಳಿಯನ್ನು ಕಾಂಗ್ರೆಸ್ ಮುಖಂಡ ಆರ್.ಎ.ನಾಗಣ್ಣ ಉದ್ಪಾಟಿಸಿದರು. ರೈತ ಸಂಘದ ಮುಖಂಡರಾದ ಬಿ.ಟಿ.ಶಿವಣ್ಣ, ಸಿ.ಕೆ.ಪುಟ್ಟೇಗೌಡ, ಬನ್ನಂಗಾಡಿ ಮನೋಹರ್, ಡಿಂಕಾ ನಂಜಪ್ಪ, ರಾಗಿಮುದ್ದನಹಳ್ಳಿ ಪ್ರಕಾಶ್, ಕಣಿವೆಕೊಪ್ಪಲು ಅಂಕಪ್ಪ, ಕುಂಬಾರಕೊಪ್ಪಲು ವಸಂತ್‌ಇದ್ದರು.


ಬಹುಮಾನ ವಿತರಣೆ: ವಾಲಿಬಾಲ್ ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಎಸ್.ದಯಾನಂದ, ಕಾಂಗ್ರೆಸ್ ಮುಖಂಡ ಸಿ.ಕೆ.ಮಂಜುನಾಥ್, ಕ್ಯಾತನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಯುವರಾಜು ಬಹುಮಾನ ವಿತರಿಸಿದರು. ಪಾಂಡವಪುರದ ಶ್ರೀ ಬಸವ ಪತಂಜಲಿ ಯೋಗಾ ಸಮಿತಿ ತಂಡ ಯೋಗ ಪ್ರದರ್ಶಿಸಿ ಮೆಚ್ಚುಗೆ ಪಡೆಯಿತು. ಬಳಿಕ ಪಾಂಡವಪುರದ ಶಾಂತಾ ನಂಜುಂಡಸ್ವಾಮಿ ತಂಡ ಸುಗಮ ಸಂಗೀತ ನಡೆಸಿಕೊಟ್ಟಿತು.


ಮುಖಂಡರಾದ ಬನ್ನಂಗಾಡಿ ಶ್ರೀನಿವಾಸ್, ಬಿಂಡಹಳ್ಳಿ ನಂಜುಂಡಸ್ವಾಮಿ, ಮಲ್ಲಿಗೆರೆ ಪಾಲಾಕ್ಷ, ಬಸವನಗುಡಿ ಜವರೇಗೌಡ, ಇಳ್ಳೇನಹಳ್ಳಿ ನರಸಿಂಹೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net