

ಕೋಟ: ನಾವೆಲ್ಲರೂ ಮಾನವರಾಗಿ ಬದುಕಬೇಕು. ಒಬ್ಬರನ್ನೊಬ್ಬರು ಪ್ರೀತಿಸಬೇಕು, ಬಡವರ ಕಣ್ಣೀರನ್ನೊರೆಸಬೇಕು ಎನ್ನುವ ಪ್ರವಾದಿಯವರ ಸಂದೇಶ ಪಾಲಿಸಬೇಕು ಎಂದು ಕೋಟದ ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ಪಾರಂಪಳ್ಳಿ ನೂರುಲ್ ಇಸ್ಲಾಂ ಮದರಸ ಕಮಿಟಿ ವತಿಯಿಂದ ವಿಶ್ವ ಪ್ರವಾದಿ ಮೊಹಮ್ಮದ್ ಮುಸ್ತಫಾ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಸಾಂಸ್ಕೃತಿಕ ಹಾಗೂ ಭಾವೈಕ್ಯತೆಯ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಪದ್ಮಶ್ರೀ ಹರೇಕಳ ಹಾಜಬ್ಬ, ಉದ್ಯಮಿ ಆಸಿಫ್ ಪಾರಂಪಳ್ಳಿ, ಉಪನ್ಯಾಸಕ ರಫೀಕ್ ಮಾಸ್ಟರ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಮಾನ್ಯ, ಸಾಥ್ವಿಕ್, ಖಲೀಲ್, ಮೊಹಮ್ಮದ್ ಅಫ್ರಾನ್, ಶಮ್ನ, ರಿಹಾಬ್, ಅಲೀಝ ಇಸ್ಮಾಯಿಲ್ ಅವರನ್ನು ಗೌರವಿಸಲಾಯಿತು. ಮದರಸ ಅಧ್ಯಕ್ಷ ಇಸ್ಮಾಯಿಲ್ ಪಾರಂಪಳ್ಳಿ, ಕಾರ್ಯದರ್ಶಿ ಶಫಿಯುಲ್ಲಾ, ಎಂ.ಜೆ.ಎಂ ಮಸೀದಿ ಖತಿಬ್ ರಾದ ಸಿದ್ದಿಕ್ ಸಖಾಫಿ, ಎಂ.ಜೆ.ಎಂ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಬಿ.ಕೆ., ಹಿದಾಯತುಲ್ ಇಸ್ಲಾಂ ಅರಬಿಕ್ ಮದರಸ ಕೋಟತಟ್ಟು ಅಧ್ಯಕ್ಷ ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು. ಇಸ್ಮಾಯಿಲ್ ಪಾರಂಪಳ್ಳಿ ಸ್ವಾಗತಿಸಿದರು. ಶಾಹಿಲ್ ಕಾರ್ಯಕ್ರಮ ನಿರೂಪಿಸಿದರು.