ಪರಿಸರ ಸ್ವಚ್ಛವಾಗಿಟ್ಟು ರೋಗಗಳು ಹರಡುವುದನ್ನು ತಡೆಗಟ್ಟಿ

20 mlv 1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34;
Published on

ಮಳವಳ್ಳಿ: ಸಾರ್ವಜನಿಕರು ತಮ್ಮ ಮನೆಗಳ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟಲು ಸಹಕರಿಸುವಂತೆ ತಾಲೂಕಿನ ರಾಗಿಬೊಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಯೋಗೇಶ್ ಮನವಿ ಮಾಡಿದರು.


ತಾಲೂಕು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಡೆಂೆ ನಿಯಂತ್ರಣ ಸಂಬಂಧ ಶನಿವಾರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಹಾಗೂ ಮನೆ ಮನೆಗಳಿಗೆ ತೆರಳಿ ಕುಟುಂಬದ ಸದಸ್ಯರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಡೆಂೆ ಜ್ವರದ ಹತ್ತಾರು ಪ್ರಕರಣಗಳು ತಾಲೂಕಿನಲ್ಲಿ ಕಂಡುಬಂದಿದ್ದು, ರೋಗಿಗಳು ಈಗಾಗಲೇ ಗುಣಮುಖರಾಗಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳು ಸೊಳ್ಳೆಗಳಿಂದ ಹರಡುವುದರಿಂದ ಅವುಗಳ ನಿಯಂತ್ರಣಕ್ಕೆ ಸೊಳ್ಳೆಗಳ ಸಂತಾನೋತ್ಪತಿ ತಡೆಗಟ್ಟಬೇಕಿದೆ ಎಂದ ಅವರು, ಸೊಳ್ಳೆ ಉತ್ಪತ್ತಿಯ ಆವಾಸ ತಾಣಗಳೇ ನೀರು ಶೇಖರಣೆ ಹಾಗೂ ಕೊಳಚೆ ಪ್ರದೇಶಗಳಾಗಿದ್ದು, ಜನಸಾಮಾನ್ಯರು ತಮ್ಮ ವಾಸದ ಮನೆಗಳ ಸುತ್ತಲಿನ ಸ್ಥಳಗಳಲ್ಲಿ ನೀರು ನಿಲ್ಲದಂತೆ ಹಾಗೂ ಪ್ರರಿಸರದ ಸ್ವಚ್ಛತೆಯ ಜತೆಗೆ ನೀರು ಶೇಖರಣೆ ತಾಣಗಳನ್ನು ವಾರಕ್ಕೊಂದು ಬಾರಿಯಾದರೂ ಖಾಲಿಮಾಡಿ ಒಣಗಿಸಿ ತುಂಬಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಗ್ರಾಪಂ ಅಧ್ಯಕ್ಷ ಪ್ರಭು ಮಾತನಾಡಿ, ನಮ್ಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ನೀರು ನಿಲ್ಲದಂತೆ ಹಾಗೂ ಸ್ವಚ್ಛತೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಗ್ರಾಮದ ಎಲ್ಲ ಮನೆಗಳಿಗೂ ತೆರಳಿ ಕುಟುಂಬದವರಿಗೆ ಸಲಹೆ ನೀಡಲಾಗುತ್ತಿದ್ದು, ನಮ್ಮ ಜತೆಗೆ ಆರೋಗ್ಯ ಇಲಾಖೆ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಭಾಗಿಯಾಗಿ ಜ್ವರದ ಲಕ್ಷಣಗಳಿರುವ ವಿವರಣೆಗಳನ್ನು ಕುಟುಂಬಗಳಿಂದ ಸಮೀಕ್ಷೆ ನಡೆಸಿ ದಾಖಲಿಸಿಕೊಂಡು ವರದಿ ನೀಡುತ್ತಿದ್ದು, ಕಾಯಿಲೆ ಹರಡುವುದರನ್ನು ಹತ್ತಿಕ್ಕಲು ಮುಂಜಾಗ್ರತೆ ವಹಿಸಲು ನೀಡುತ್ತಿರುವ ಸಲಹೆಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.


ಗ್ರಾಪಂ ಸದಸ್ಯ ರವಿ, ಪಿಡಿಒ ಈರಣ್ಣಯ್ಯ, ಕಂಪ್ಯೂಟರ್ ಆಪರೇಟರ್ ನಾಗೇಂದ್ರ, ಆರೋಗ್ಯ ಇಲಾಖೆ ಸಿಬ್ಬಂದಿ ಮಂಜುನಾಥ, ಸಿಂಧು ಹಾಗೂ ಮುಖಂಡರಾದ ಶಿವು, ಪ್ರದೀಪ್, ಶಿವಶಂಕರ್, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net