ಪೂರ್ವಜರ ಆಚಾರಗಳನ್ನು ಜೀವಂತವಾಗಿರಿಸಿ

Oplus_16908288
Oplus_16908288
Published on

ವಿರಾಜಪೇಟೆ: ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಶೈಕ್ಷಣಿಕ, ಆರೋಗ್ಯ ಮತ್ತು ಜನಪರ ಯೋಜನೆಗಳಿಗೆ ಜಮೀನು ದಾನ ನೀಡಿ ಯುಗಪುರುಷರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಂದ ಬಂದ ಆಚಾರ, ವಿಚಾರಗಳು ಸಹ ಜೀವಂತವಾಗಿರಸಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ಕೊಡವ ಸಮಾಜ ವಿರಾಜಪೇಟೆ ಆವರಣದಲ್ಲಿ ಕಾವೇರಿ ಕೊಡವ ಕೇರಿ ಅಪ್ಪಯ್ಯ ಸ್ವಾಮಿ ರಸ್ತೆ ವಿರಾಜಪೇಟೆ ಮತ್ತು ವಿರಾಜಪೇಟೆ ಕೊಡವ ಸಂಘ ಒಕ್ಕೂಟ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಾಲ್ಕನೇ ವರ್ಷದ ಅಂತರ್ ಕೊಡವ ಕೇರಿ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊಡವ ಜನಾಂಗದ ಜನರು ಕಡಿಮೆ ಪ್ರಮಾಣದಲ್ಲಿದ್ದರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶ-ವಿದೇಶಗಳಲ್ಲಿ ಖ್ಯಾತಿ ಹೊಂದಿದ್ದಾರೆ. ಪೂರ್ವ ಪರಂಪರೆಯ ಇತಿಹಾಸದಿಂದ ಬಂದಿರುವ ಕೊಡವರ ಆಚಾರ ವಿಚಾರಗಳು, ಪರಂಪರೆ, ಸಂಸ್ಕೃತಿಗಳು ನೆಲೆ ನಿಲ್ಲಲು ಕ್ರೀಡೆಗಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿದೆ. ಕ್ರೀಡೆಗಳಿಗೆ ಗೌರವ ನೀಡಿ, ಒಂದೇ ಕ್ರೀಡೆಗೆ ಒತ್ತು ನೀಡದೆ ವಿವಿಧ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ, ಕೊಡವ ಕೇರಿಗಳ ಮಧ್ಯೆ ಇಂತಹ ಕ್ರೀಡೆಗಳನ್ನು ಆಯೋಜಿಸಿರುವುದು ಭಾತೃತ್ವ್ವ ಬಂಧಗಳನ್ನು ಬಿಗಿಗೊಳಿಸುವಂತೆ, ಕ್ರೀಡೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತಾಗಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಪೊನ್ನಪ್ಪ, ಕರಾಟೆ ಪಟು ಮತ್ತು ತರಬೇತಿದಾರರಾದ ಕಣರ್ಂಡ ಸೋಮಣ್ಣ, ಕ್ರೀಡಾ ಕ್ಷೇತ್ರದ ತಾಂತ್ರಿಕ ಶಿಕ್ಷಣದ ಪ್ರಮುಖರಾದ ನೆರವಂಡ ಸುರೇಶ್ ಬಿ. ಅವರಿಗೆ ನೆನಪಿನ ಕಾಣಿಕೆ ಸನ್ಮಾನಿಸಲಾಯಿತು. ಐದು ವರ್ಷದಿಂದ 60 ವರ್ಷದವರೆಗಿನ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಬಾಲಕರ ಬಾಲಕಿಯರ, ಯುವಕರ ಯುವತಿಯರ, ಪುರುಷರ ಮತ್ತು ಮಹಿಳೆಯರ ವಿಭಾಗದದಲ್ಲಿ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸಡ್ ಡಬಲ್ಸ್ ವರ್ಗದಲ್ಲಿ ಕ್ರೀಡಾಕೂಟ ನಡೆಸಲಾಗಿತ್ತು. ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ವಿಜೇತ ಪಟುಗಳಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ನಗರದ ಎಳು ಕೊಡವ ಕೇರಿಗಳು ಭಾಗವಹಿಸಿ ಚಿಕ್ಕಪೇಟೆ ಕೊಡವ ಕೇರಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು.

ಕಾವೇರಿ ಕೊಡವ ಕೇರಿ ಅಧ್ಯಕ್ಷರಾದ ಮೇರಿಯಂಡ ಅರಸು ಅಚ್ಚಪ್ಪ, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ವಿರಾಜಪೇಟೆ ಕೊಡವ ಸಂಘ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಕೊಡವ ಸಮಾಜ ವಿರಾಜಪೇಟೆ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಾಂಡ ಎ.ಗಣಪತಿ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ, ನಾಪೊಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಕಾವೇರಿ ಕೊಡವ ಕೇರಿಯ ಪದಾಧಿಕಾರಿಗಳು, ಸದಸ್ಯರು, ವಿರಾಜಪೇಟೆ ಕೊಡವ ಸಮಾಜದ ಪದಾಧಿಕಾರಿಗಳು, ಸದಸ್ಯರು, ಎಳು ಕೊಡವ ಕೇರಿಯ ಪದಾಧಿಕಾರಿಗಳು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net