ವಾಹನಗಳಿಗೆ ಕಸ ನೀಡಿ ನಗರದ ಸ್ವಚ್ಛತೆ ಕಾಪಾಡಿ

Published on

ಗೌರಿಬಿದನೂರು ವಾರ್ಡ್​ಗಳ ಜನರ ಸಮಸ್ಯೆ ಆಲಿಕೆ | ನಗರಸಭೆ ಅಧ್ಯಕ್ಷ ಲಕ್ಷಿ$್ಮ ನಾರಾಯಣಪ್ಪ, ಪೌರಾಯುಕ್ತ ರಮೇಶ್​ಯಿಂದ ಪರಿಶೀಲನೆ

ಗೌರಿಬಿದನೂರು: ನಗರಸಭೆ ಅಧ್ಯಕ್ಷ ಲಕ್ಷಿ$್ಮ ನಾರಾಯಣಪ್ಪ ಹಾಗೂ ಪೌರಾಯುಕ್ತ ರಮೇಶ್​ ನಗರದ 15, 17, 18, 20, 27 ಮತ್ತು 28 ನೇ ವಾರ್ಡ್​ಗಳಲ್ಲಿ ಸಂಚರಿಸಿ ಜನರ ಕುಂದು&ಕೊರತೆ ಆಲಿಸಿದರು. ಸಾರ್ವಜನಿಕರು ಸ್ವಚ್ಛತೆ, ನೀರಿನ ಸಮಸ್ಯೆ, ಚರಂಡಿ ಹಾಗೂ ರಸ್ತೆ ದುರಸ್ತಿ ಮಾಡಿಸಿ ಎಂದರು.

ನಗರಸಭೆ ಅಧ್ಯಕ್ಷ ಲಕ್ಷಿ$್ಮ ನಾರಾಯಣಪ್ಪ ಮಾತನಾಡಿ, ಮಳೆಗಾಲವಾದ್ದರಿಂದ ಹಲವು ಕಡೆ ತಾತ್ಕಾಲಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ರಸ್ತೆ ಮತ್ತು ಚರಂಡಿಗಳ ಅವ್ಯವಸ್ಥೆಗಳಿಂದ ಜನತೆಗೆ ತೊಂದರೆಯಾಗದಂತೆ ಪರಿಹಾರ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಚರಂಡಿಗಳಲ್ಲಿ ಕಸ ಸುರಿದು ಮಾಲಿನ್ಯ ಉಂಟುಮಾಡದೆ, ಮನೆಯ ಬಾಗಿಲಿಗೆ ಬರುವ ಕಸದ ವಾಹನಗಳಿಗೆ ಕಸ ನೀಡಿ ನಗರದ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು ಎಂದರು.

ಪೌರಾಯುಕ್ತ ರಮೇಶ್​ ಮಾತನಾಡಿ, ನಗರದ ಜನತೆ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಜನರು ಪಾವತಿಸುವ ವಿವಿಧ ತೆರಿಗೆಗಳು ನಗರಸಭೆಯ ಪ್ರಮುಖ ಆದಾಯವಾಗಿದ್ದು, ಸಕಾಲಕ್ಕೆ ತೆರಿಗೆ ಪಾವತಿಸಿದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಗರಸಭೆಯಲ್ಲಿ ಯಾವುದೇ ಕೆಲಸಗಳಿಗೆ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಅದನ್ನು ಸಾರ್ವಜನಿಕರು ಪ್ರೋತ್ಸಾಹಿಸಬಾರದು. ಈಗ ಇ&ಖಾತೆ ಆಂದೋಲನ ನಡೆಸುವ ಮೂಲಕ ಜನರಿಗೆ ಸುಲಭವಾಗಿ ಖಾತೆಗಳನ್ನು

ತಲುಪಿಸಲಾಗುತ್ತಿದ್ದು, ಅದರ ಸದುಪಯೋಗಪಡಿಸಿಕೊಳ್ಳಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net