ಪರಿಪೂರ್ಣ ಜ್ಞಾನ, ಶಿಸ್ತು ಮೈಗೂಡಿಸಿಕೊಳ್ಳಿ

23-hvr-03
Published on

ಹಾವೇರಿ: ಪರೀಕ್ಷಾ ದೃಷ್ಟಿಕೋನದಿಂದ ಮಾತ್ರ ವಿದ್ಯಾರ್ಥಿಗಳು ಪಠ್ಯ ಓದದೇ ಸುಂದರ ಬದುಕು ನಿರ್ವಿುಸಿಕೊಳ್ಳಲು ಪೂರಕವಾಗುವಂತಹ ಅಧ್ಯಯನದಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ನಗರದ ಜಿಎಚ್ ಕಾಲೇಜ್​ನಲ್ಲಿ ಸೋಮವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕಾಲೇಜ್ ಒಕ್ಕೂಟ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಇಂದಿನ ಜನತೆ ಕೇವಲ ಮೊಬೈಲ್​ಫೋನ್, ನೆಟ್, ಇನ್ನುಳಿದ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿಕೊಳ್ಳಬೇಕು. ಪರಿಪೂರ್ಣ ಜ್ಞಾನ ಮತ್ತು ಶಿಸ್ತು ಮೈಗೂಡಿಸಿಕೊಳ್ಳಬೇಕು. ಪರೀಕ್ಷೆಗಳು ಮನುಷ್ಯನನ್ನು ಓರೆಗೆ ಹಚ್ಚುವ ಕಲ್ಲುಗಳಿದ್ದಂತೆ. ಸಮಯದ ಸದ್ಭಳಕೆ, ಬದುಕಿನ ಕ್ರಮ, ಪರಸ್ಪರ ಗೌರವ ಇಟ್ಟುಕೊಂಡು ಉತ್ತಮ ಪ್ರಜೆಗಳಾಗಬೇಕು. ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳನ್ನು ತಿಳಿದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾಲೇಜ್​ನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಡಿ. ಶಿರೂರ ಮಾತನಾಡಿ, ‘ವಿದ್ಯಾರ್ಥಿಗಳಾದವರು ಸಮಯ ಹಾಳು ಮಾಡದೆ ವಿಭಿನ್ನ ಮಾದರಿಯ ಶಿಕ್ಷಣ ಪಡೆಯುವ ಮತ್ತು ಕೌಶಲ ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ಸಂಸ್ಥೆಯ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ‘ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಅಂಟಿಕೊಳ್ಳದೇ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು’ ಎಂದರು.

ಸ್ಥಾನಿಕ ಮಂಡಳಿ ಸದಸ್ಯರಾದ ಬಸವರಾಜ ಮಾಸೂರ, ಎಸ್.ಜೆ. ಹೆರೂರ, ಇತರರು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಡಿ.ಎ. ಕೊಲ್ಲಾಪುರೆ, ಪ್ರೊ. ಎಸ್.ಜಿ. ಹುಣಸಿಕಟ್ಟಿಮಠ ಹಾಗೂ ಡಾ. ಬಿ.ಎನ್. ವಾಸುದೇವನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net