ಕಾವೇರಿಯನ್ನು ಕಲುಷಿತಗೊಳಿಸದೆ ಉಳಿಸಿ

2ark2
ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಸುತ್ತ ಗ್ರಾಮಸ್ಥರು ಸ್ವಚ್ಛತಾ ಕಾರ್ಯ ನಡೆಸಿದರು.
Published on

ಅರಕಲಗೂಡು: ಮನುಕುಲದ ಭವಿಷ್ಯಕ್ಕಾಗಿ ಜೀವನದಿ ಕಾವೇರಿಯನ್ನು ಕಲುಷಿತಗೊಳಿಸದೆ ಹನಿ ನೀರನ್ನು ಉಳಿಸಿಸಬೇಕಾಗಿದೆ. ಜಲಮೂಲ ಸಂರಕ್ಷಿಸಬೇಕಿದೆ ಎಂದು ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಾರುಪತ್ತೇಗಾರ್ ರಮೇಶ್ ಭಟ್ ನಲ್ಲಿತೀರ್ಥ ಹೇಳಿದರು.

ತಾಲೂಕಿನ ರಾಮನಾಥಪುರದಲ್ಲಿ ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಸ್ವಚ್ಛತೆ ಇದ್ದರೆ ನಾವೂ ಸ್ವಚ್ಛಂದ ಇದ್ದ ಹಾಗೆ. ಅದ್ದರಿಂದ ನಮ್ಮ ಮನೆಯ ಸುತ್ತ ಅಕ್ಕಪಕ್ಕದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಪ್ರತಿಯೊಬ್ಬರೂ ಶುಚಿತ್ವದ ಕಡೆ ಗಮನ ಹರಿಸಬೇಕು ಎಂದರು.

ದೇವಸ್ಥಾನದ ಸುತ್ತ, ರಸ್ತೆಯ ಪಕ್ಕ ಇರುವ ಚರಂಡಿಗಳ ಬದಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಸುಧಾನ್ಮಿತ, ಅನನ್ಯಾ, ಧನುಷ್ಯಾ, ಚಾರಿತ್ರಾ, ಗಾನವಿ, ರುಷಿಕೇಶ, ಸಿಂಹಾದ್ರಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net