

ಸಂಡೂರು: ಅನಾರೋಗ್ಯ ಪೀಡಿತರು ಚಿಕಿತ್ಸೆ ಪಡೆಯಲು ಬಂದಾಗ ಗುಣಾತ್ಮಕ ಸೇವೆ ಒದಗಿಸುವುದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಡಿಎಚ್ಒ ಡಾ.ಜನಾರ್ದನ್ ಹೇಳಿದರು.
ಇದನ್ನೂ ಓದಿ: ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಆರೋಗ್ಯ ಸಹಕಾರಿ
ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರೇರಣ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಒಳ್ಳೆಯ ಸೇವೆಯಿಂದ ಭಗವಂತ ನಮಗೆ ಆರೋಗ್ಯ ಕರುಣಿಸುತ್ತಾನೆ. ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಪಡೆಯಲು ನಾವೆಲ್ಲರೂ ಶ್ರಮವಹಿಸಿ ಕೆಲಸ ಮಾಡೋಣ. ಈಗ ಆರೋಗ್ಯ ಕೇಂದ್ರದ ವಾತಾವರಣವೇ ಬದಲಾಗಿದೆ. ಸ್ವಚ್ಛತೆಗೆ ಗಮನ ಹರಿಸುವುದರಿಂದ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ. ಆಡಳಿತಾತ್ಮಕ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ ಎಂದರು.
ತಾಲೂಕು ನೋಡಲ್ ಅಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಾದಿಯಾ ಮಾತನಾಡಿದರು. ಉತ್ತಮ ಕೆಲಸ ಮಾಡಿದ ಸಿಬ್ಬಂದಿಗೆ ಪ್ರಶಂಸಾ ಪ್ರಮಾಣ ಪತ್ರ, ಆಶಾ ಕಾರ್ಯಕರ್ತೆಯರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ನೋಡಲ್ ಅಧಿಕಾರಿ ಡಾ.ವಿಶಾಲಾಕ್ಷಿ, ಟಿಎಚ್ಒ ಭರತ್ ಕುಮಾರ್, ಡಾ.ಕುಶಾಲ್ ರಾಜ್, ಡಾ.ರಜಿಯಾ ಬೇಗಂ, ಡಾ.ಅಕ್ಷಯ್ ಕುಮಾರ್, ಡಾ.ಅನುಷಾ, ಡಾ.ಪ್ರಿಯಾಂಕಾ, ಡಾ.ಹರೀಶ್, ಡಿಎಚ್ಇಒ ಈಶ್ವರ್ ದಾಸಪ್ಪನವರ್, ಬಿಎಚ್ಇಒ ಶಿವಪ್ಪ, ಸೂಪರಿಂಟೆಂಡೆಂಟ್ ಹಷರ್, ಪ್ರಶಾಂತ ಕುಮಾರ್, ರೀಟಾ, ಶಕೀಲ್ ಅಹಮದ್, ಮಂಜುನಾಥ್, ವಂಕಟೇಶ್ ಇತರರಿದ್ದರು.