More

    ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ಆರೋಗ್ಯ ಸಹಕಾರಿ

    ಹುಬ್ಬಳ್ಳಿ: ನಗರದ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾ ಡಿ.ಜೆ. ಛೇಡಾ ಐಟಿಐದಲ್ಲಿ 2023ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಪಾರಿತೋಷಕ ವಿತರಣೆ ಸಮಾರಂಭವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯಬೇಕಾದರೆ ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.

    ಕ್ರೀಡಾಕೂಟದಡಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿವೆ. ಉತ್ತಮ ಆರೋಗ್ಯ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ವಿದ್ಯಾರ್ಥಿಗಳು ಮೊಬೈಲ್‌ಪೋನ್ ಗೀಳಿನಿಂದ ಹೊರಗೆ ಬರಬೇಕು ಎಂದು ತಿಳಿಸಿದರು.

    ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪಾರಿತೋಷಕ ವಿತರಿಸಲಾಯಿತು. ಐಟಿಐ ಪ್ರಾಚಾರ್ಯ ಆರ್.ಬಿ. ಸಾಬಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

    ರತ್ನಪಾಲ ಶೆಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯ ಲೋಹಿತ ಸರ್ಜನ್, ರವಿಕುಮಾರ ಕೋಟಿ, ಹರ್ಷ ಆದಪ್ಪನವರ, ಆರ್.ಎಸ್. ಅಪ್ಪಣ್ಣವರ, ವಿ.ವಿ. ಮೇಲ್ಮುರಿ, ಎಸ್.ಐ. ವನಹಳ್ಳಿಮಠ, ಗುರುಸಿದ್ದಪ್ಪ ಬಡಿಗೇರ, ಸಿ.ಜಿ. ಪತ್ರಾವಳಿ, ಎಂ.ಕೆ. ಲಿಂಬಿಕಾಯಿ, ಜಾಕೋಬ್ ಡೋಕ್ಕಾ, ಮಹಾಂತೇಶ ಹೂಗಾರ ಹಾಗೂ ಇತರರು ಉಪಸ್ಥಿತರಿದ್ದರು. ಗುರುಸಿದ್ದಪ್ಪ ಬಡಿಗೇರ ಸ್ವಾಗತಿಸಿದರು. ಆರ್.ಎನ್. ಕೋಟಿ ನಿರೂಪಿಸಿದರು. ವಿ.ಡಿ. ಧರಣೆಪ್ಪನವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts