More

    ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಅಗತ್ಯ

    ನರೇಗಲ್ಲ: ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಶಾಲಾ ಸಂಸತ್ ಸಹಕಾರಿಯಾಗಿದೆ. ರಾಜಕೀಯ ಪ್ರಜ್ಞೆಯನ್ನು ಪ್ರೌಢಶಾಲಾ ಹಂತದಲ್ಲಿಯೇ ಬೆಳೆಸಿದರೆ ನಾಡಿನ ಮುಂದಿನ ಉತ್ತಮ ನಾಯಕರಾಗಬಲ್ಲರು ಎಂದು ಎಸ್.ಎ. ಕಾಲೇಜ್ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಹೇಳಿದರು.

    ಪಟ್ಟಣದ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ ಸಂಸತ್ ಮತ್ತು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವ ಮೂಲಕ ವ್ಯಕ್ತಿತ್ವವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದರು.

    ಆಡಳಿತ ಮಂಡಳಿ ಸದಸ್ಯ ವೀರಣ್ಣ ಹಳ್ಳಿ, ನಿಂಗನಗೌಡ ಲಕ್ಕನಗೌಡರ, ಷಣ್ಮುಖಪ್ಪ ಶಿದ್ನೇಕೊಪ್ಪ, ಮಲ್ಲಿಕಾರ್ಜುನಪ್ಪ ಮೆಣಸಗಿ, ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ಮುಖ್ಯ ಶಿಕ್ಷಕ ಎಸ್.ಎನ್ ಹೂಲಗೇರಿ, ಎ.ಟಿ. ಮಳ್ಳಳ್ಳಿ ಮಾತನಾಡಿದರು. ಬಿ.ಡಿ. ಯರಗೊಪ್ಪ, ಎಂ.ಎಸ್. ಅತ್ತಾರ, ಕೆ.ಸಿ. ಜೋಗಿ, ಎಸ್. ಶಿವಮೂರ್ತಿ, ಎಸ್.ಎಫ್. ಧರ್ಮಾಯತ, ಆರ್.ಎಂ. ಗುಳಬಾಳ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಗೌರಿ , ಗಾಯತ್ರಿ, ಪ್ರಿಯಾ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts