

ಸಿಂಧನೂರು: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರೊಂದಿಗೆ ಕಾಯಕದ ಮಹತ್ವ ಸಾರಿದವರಲ್ಲಿ ನುಲಿಯ ಚಂದಯ್ಯ ಪ್ರಮುಖರಾಗಿದ್ದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಇದನ್ನೂ ಓದಿ: ಕಾಯಕದ ಮಹತ್ವ ಸಾರಿದ ನುಲಿಯ ಚಂದಯ್ಯ
ನಗರದ ಕೊರವರ ಓಣಿಯಲ್ಲಿ ಅಖಿಲ ಕರ್ನಾಟಕ ಕುಳವ ಮಹಾಸಂಘದಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ನುಲಿಯ ಚಂದಯ್ಯ ಅವರ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಕಾಯಕದಿಂದಲೇ ದೇವರನ್ನು ಕಂಡ ಈ ಮಹಾನ್ ಶರಣರ ಬದುಕು ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ಬಸವಕೇಂದ್ರ ಜಿಲ್ಲಾಧ್ಯಕ್ಷ ಪಿ.ವೀರಭದ್ರಪ್ಪ ಕುರುಕುಂದಿ, ಸಮುದಾಯದ ಪ್ರಮುಖರಾದ ಮರಿಯಪ್ಪ, ತಿಮ್ಮಣ್ಣ, ಯಮನಪ್ಪ, ಮರಿಯಪ್ಪ ತುರಡಗಿ, ಬಾಲಪ್ಪ, ದ್ಯಾವಪ್ಪ, ಗಂಗಣ್ಣ, ಆದಯ್ಯ, ತನ್ವರ್, ಮುನೀರ್ ಬಾಷಾ ಇತರರಿದ್ದರು.